ಪೊಲೀಸ್ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಜ್ಞಾನಬುತ್ತಿಯಿಂದ ಉಚಿತ ತರಬೇತಿ: ನೋಂದಾಯಿಸಿಕೊಳ್ಳಿ

ಮೈಸೂರು,ಡಿಸೆಂಬರ್,24,2025 (www.justkannada.in): ಕರ್ನಾಟಕ ಸರ್ಕಾರವು ಶೀಘ್ರದಲ್ಲೇ ಭರ್ತಿ ಮಾಡಲಿರುವ 20,000ಕ್ಕೂ ಹೆಚ್ಚು ಪೊಲೀಸ್ ಕಾನ್ಸ್‌ ಟೇಬಲ್ ಹಾಗೂ ಸಬ್‌ ಇನ್ಸ್‌ ಪೆಕ್ಟರ್ ಹುದ್ದೆಗಳ ನೇಮಕಾತಿ ಪರೀಕ್ಷೆಗೆ  ಮೈಸೂರಿನ ಜ್ಞಾನಬುತ್ತಿ ವಿಶೇಷ ಮಾರ್ಗದರ್ಶನ  ನೀಡಲು ಮುಂದಾಗಿದೆ.

ಸಾವಿರಾರು ಅಭ್ಯರ್ಥಿಗಳು ಪೊಲೀಸರಾಗುವ ಕನಸು ನನಸು ಮಾಡಿಕೊಳ್ಳುವ ನಿಟ್ಟಿನಲ್ಲಿ ಸಮರ್ಥ ಮಾರ್ಗದರ್ಶನ ನೀಡಿದ ಹೆಗ್ಗಳಿಕೆ ಹೊಂದಿರುವ ‘ಜ್ಞಾನಬುತ್ತಿ’ ಸಂಸ್ಥೆಯು ಈ ಬಾರಿಯೂ ಉಚಿತ ತರಬೇತಿ ನೀಡಲು ಸಜ್ಜಾಗಿದೆ.

ಅರ್ಹತೆ: ಪದವಿ ಓದುತ್ತಿರುವ ಅಥವಾ ಈಗಾಗಲೇ ಪದವಿ ಪೂರೈಸಿರುವ ಆಸಕ್ತ ಅಭ್ಯರ್ಥಿಗಳಿಗೆ ತರಬೇತಿಯಲ್ಲಿ ಆದ್ಯತೆ ನೀಡಲಾಗುವುದು.

ನೋಂದಣಿ ಸಮಯ: ಪ್ರತಿದಿನ ಸಂಜೆ 5:30 ರಿಂದ 7:30 ರವರೆಗೆ

ನೋಂದಣಿ ಪ್ರಕ್ರಿಯೆ: ಆಸಕ್ತರು

ದಿನಾಂಕ 31-12-2025 ರೊಳಗೆ ಲಕ್ಷ್ಮೀಪುರಂನಲ್ಲಿರುವ ಸಂಸ್ಥೆಯ ಕಚೇರಿಗೆ ಖುದ್ದಾಗಿ ಭೇಟಿ ನೀಡಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು.

ಸ್ಥಳ: ಜ್ಞಾನಬುತ್ತಿ ಸಂಸ್ಥೆ, ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು ಆವರಣ, ಲಕ್ಷ್ಮೀಪುರಂ, ಮೈಸೂರು.

ಸಂಪರ್ಕಿಸಿ:

ಹೆಚ್.ಬಾಲಕೃಷ್ಣ (ಕಾರ್ಯದರ್ಶಿಗಳು): 9448117455

ಸಿ.ಕೆ ಕಿರಣ್ ಕೌಶಿಕ್: 992830857

ಕೆ.ವೈ ನಾಗೇಂದ್ರ: 8296788251

Key words: Free Coaching, Mysore, Jnanabutthi, Police,  Recruitment