ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದಿಂದ ಉಚಿತ ಸಿನಿಮಾ ತರಬೇತಿ

ಬೆಂಗಳೂರು, ಅಕ್ಟೋಬರ್ 12, 2019 (www.justkannada.in): ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ ಸಿನಿಮಾ ಆಸಕ್ತರಿಗಾಗಿ ಉಚಿತ ಚಲನಚಿತ್ರ ತರಬೇತಿ ಶಿಬಿರವನ್ನು ಆಯೋಜಿಸಿದೆ.

‘ನಾಡಿನಾದ್ಯಂತ ಇರುವ ಅನೇಕ ಸಿನಿಮಾ ಆಸಕ್ತರು ಹೊಸ ತಂತ್ರಜ್ಞಾನದೊಂದಿಗೆ ಸಿನಿಮಾ ತಯಾರಿಸಲು ಸೂಕ್ತ ತರಬೇತಿಯ ಕೊರತೆಯನ್ನು ಅನುಭವಿಸುತ್ತಿದ್ದಾರೆ.

ಇದನ್ನು ಮನಗಂಡು ನಮ್ಮ ಸಂಘದಿಂದ ಒಂದು ದಿನದ ಮಟ್ಟಿಗೆ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ’ ಎಂದು ನಿರ್ದೇಶಕರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹೇಳಿದ್ದಾರೆ.