ಬೆಳಗಾವಿ,ಆಗಸ್ಟ್,12,2025 (www.justkannada.in): ಕೆಲಸ ಕೊಡಿಸುವುದಾಗಿ ಹೇಳಿ 16 ಜನರಿಂದ 34 ಲಕ್ಷಕ್ಕೂ ಹೆಚ್ಚು ಹಣವನ್ನ ಪಡೆದು ವಂಚನೆ ಮಾಡಿರುವ ಆರೋಪ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗ ಮಂಜುನಾಥ್ ವಿರುದ್ದ ಕೇಳಿಬಂದಿದೆ.
ಸಾಮಾಜಿಕ ಕಾರ್ಯಕರ್ತ ಜಯಂತ ತೀನೇಕರ್ ಎಂಬುವವರು ಈ ಆರೋಪ ಮಾಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕ ರ್ ಬೆಂಬಲಿಗ ಮಂಜುನಾಥ್ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ 16 ಜನರಿಗೆ ವಂಚನೆ ಮಾಡಿದ್ದಾರೆ. 34 ಲಕ್ಷಕ್ಕೂ ಅಧಿಕ ಹಣ ಪಡದು ವಂಚನೆ ಮಾಡಿದ್ದಾರೆ. ರಾಜ್ಯಪಾಲರ ಆದೇಶ ನಕಲಿ ಪತ್ರಗಳನ್ನ ನೀಡಿ ವಂಚಿಸಿದ್ದಾರೆ. ಅಲ್ಲದೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ನಕಲಿ ಸಹಿ ಮಾಡಿ ಆದೇಶ ಪ್ರತಿ ವಿತರಿಸಿದ್ದು, ಬೆಳಗಾವಿ ಬೈಲಹೊಂಗಲ ಖಾನಾಪುರ ಸೇರಿ ಹಲವೆಡೆ ವಂಚನೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಲಕ್ಷ್ಮಿ ಹೆಬ್ಬಾಳ್ಳರ್ ಅವರ ಖಾಸಗಿ ಪಿಎ ಸಂಗನಗೌಡ ಹೆಸರು ತಳಕು ಹಾಕಲಾಗಿದೆ. ನಾವು ಕೊಟ್ಟ ದೂರನ್ನು ಪೊಲೀಸರು ಸ್ವೀಕರಿಸದ ಹಿನ್ನೆಲೆ ಗಂದಿಗವಾಡದ ಕಾವ್ಯ ಯಲ್ಲೂರಿಂದ ವಂಚನೆ ಕುರಿತು ಕೋರ್ಟ್ ನಲ್ಲಿ ದೂರು ನೀಡಲಾಗಿದೆ. ನಾವು ಕೋರ್ಟ್ ನಲ್ಲಿ ಕೇಸ್ ಹಾಕಿದ್ದೇವೆ. ಕಿತ್ತೂರು ಠಾಣೆ ವ್ಯಾಪ್ತಿಗೆ ಈ ಘಟನೆ ಬರದಿದ್ದರೂ ಕಿತ್ತೂರು ಪೊಲೀಸರಿಂದ ನಿರಂತರ ಕಿರಿಕಿರಿಯಾಗುತ್ತಿದೆ. ಈ ಬಗ್ಗೆ ರಾಜ್ಯಪಾಲರು ಸಿಎಂ, ಗೃಹಸಚಿವರಿಗೂ ದೂರು ನೀಡಿದ್ದೇವೆ ಎಂದು ಜಯಂತ್ ತಿನೇಕರ್ ತಿಳಿಸಿದ್ದಾರೆ.
Key words: Fraud, allegations, against, Minister Lakshmi Hebbalkar’s, supporter