ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 3ನೇ ವರ್ಷದ ಪುಣ್ಯಸ್ಮರಣೆ: ಗಿಡ ನೆಡುವ ಮೂಲಕ ಸ್ಮರಣಾ ಕಾರ್ಯಕ್ರಮ.

ಮೈಸೂರು,ಆಗಸ್ಟ್,16,2021(www.justkannada.in): ಮಾಜಿ ಪ್ರಧಾನಿ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ 3ನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಪ್ರಜ್ಞಾವಂತ ನಾಗರಿಕ ವೇದಿಕೆ  ವತಿಯಿಂದ ಚಾಮುಂಡಿಪುರಂನಲ್ಲಿರುವ ತಗಡೂರು ರಾಮಚಂದ್ರರಾವ್ ಉದ್ಯಾನವನದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರ ಹಿಡಿದು ವಿವಿಧ ಜಾತಿಯ ಸಸಿಗಳನ್ನು ನೆಡುವ ಮೂಲಕ  ಸ್ಮರಿಸಲಾಯಿತು.

ಕಾರ್ಯಕ್ರಮ ಉದ್ದೇಶಿಸಿ  ಮಾತನಾಡಿದ ಮೈಸೂರು ನಗರ ಹಿಂದುಳಿದ ವರ್ಗಗಳ ಮೋರ್ಚಾ  ಅಧ್ಯಕ್ಷ ರಾದ ಜೋಗಿ ಮಂಜು, ಅಟಲ್ ಬಿಹಾರಿ ವಾಜಪೇಯಿ ಅವರು ಮೂರು ಬಾರಿ ನಮ್ಮ ದೇಶದ ಪ್ರಧಾನಮಂತ್ರಿಗಳಾಗಿ ತಮ್ಮದೇ ಆದ ಅಭೂತಪೂರ್ವ ಸೇವೆ ಸಲ್ಲಿಸಿದ್ದಾರೆ. ಭಾರತೀಯರ ಪ್ರತಿಯೊಬ್ಬರ ಕನಸಾಗಿದ್ದ ಅಯೋಧ್ಯೆ ರಾಮಜನ್ಮ ಭೂಮಿ ನಿರ್ಮಾಣ ಹೋರಾಟ ಸಾಕಾರಗೊಳ್ಳಲು ವಿಜಯಸಂಕಲ್ಪ ಯಾತ್ರೆ ಮೂಲಕ ಯಶಸ್ವಿಯಾಗಲೂ ಯೋಜನೆ ರೂಪಿಸಿದವರೇ ಅಟಲ್ ಜೀ ರವರು, ರಾಜಕರಣದೊಂದಿಗೆ ಅನೇಕ ಸಾಮಾಜಿಕ,ಸಾಂಸ್ಕೃತಿಕ, ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಸೇವೆಗೈದಿದ್ದಾರೆ.1961 ರಿಂದ ಬಹುಕಾಲ ರಾಷ್ಟ್ರೀಯ ಭಾವೈಕ್ಯತಾ ಮಂಡಳಿಯ ಸದಸ್ಯರು ,ಆಲ್ ಇಂಡಿಯಾ ಸ್ಟೇಷನ್ ಮಾಸ್ಟರ್ಸ್ ಹಾಗೂ ಅಸಿಸ್ಟೆಂಟ್ಸ್ ಸ್ಟೇಷನ್ ಮಾಸ್ಟರ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾಗಿಯೂ ದುಡಿದದ್ದು ಅಪಾರ,ಪಂಡಿತ್ ಧೀನ್ ದಯಾಳ್ ಉಪಾಧ್ಯಾಯ ಸ್ಮಾರಕ ಸಮಿತಿ, ಜನ್ಮಭೂಮಿ ಸ್ಮಾರಕ ಸಮಿತಿಗಳ ಸದಸ್ಯರಾಗಿಯೂ ಇವರ ಕೊಡುಗೆ ಕೈಗನ್ನಡಿಯಾಗಿದೆ ಎಂದು ಅವರು ಹೇಳಿದರು.

ಇದಲ್ಲದೇ ರಾಜ್ಯಸಭೆ, ಲೋಕಸಭೆಗಳ ಅನೇಕ ಸಮಿತಿಗಳಲ್ಲಿ ಕಾರ್ಯ ನಿರ್ವಹಿಸಿರುತ್ತಾರೆ.ಉತ್ತಮ ಕವಿ,ಬರಹಗಾರರಾಗಿಯೂ ಹೆಸರು ಗಳಿಸಿದ್ದಾರೆ,ರಾಷ್ಟ್ರಧರ್ಮ,ಪಾಂಚಜನ್ಯ,ಸ್ವದೇಶಿನೀತಿ ಅನುಸರಿಸುವಿಕೆ ಮತ್ತು ವೀರ ಅರ್ಜುನ್‌ ಅಂತಹ ಅನೇಕ‌ ಪತ್ರಿಕೆಗಳ ಸಂಪಾದಕರಾಗಿಯೂ ಅಟಲ್ ಜೀ ರವರು ಕೆಲಸ ಮಾಡಿದ್ದಾರೆ ಎಂದು ಅವರು ತಿಳಿಸಿದರು.

ನಮ್ಮ ದೇಶದಲ್ಲಿ ಉತ್ಪತ್ತಿಯಾಗುವ ಆಹಾರ ಪದಾರ್ಥಗಳು,ಅಥವಾ ಇನ್ನಿತರ ವಸ್ತುಗಳಿಗೆ ಹೆಚ್ಚಿನ ಬೇಡಿಕೆ ಸಿಗಬೇಕು ಮತ್ತು ನಮಗೆ ಬೇಕಾಗುವಷ್ಟು ವಸ್ತುಗಳು ಅಥವಾ ಇನ್ನಿತರ ಸರಕುಗಳು ಇಲ್ಲೇ ಉತ್ಪನ್ನವಾಗಬೇಕೆಂಬುದರ ಆತ್ಮವಿಶ್ವಾಸವನ್ನು ಭಾರತೀಯರಲ್ಲಿ ತುಂಬುವಂತಹ ಕೆಲಸ ಮಾಡಿದವರೀ ಅಟಲ್ ಬಿಹಾರಿ ವಾಜಪೇಯಿ ರವರು ಎಂಬ ಅವರ ಹೋರಾಟದ ಹಿನ್ನೆಲೆಯನ್ನು ತಿಳಿಸಿದರು.

ಭಾರತದ ಕನ್ಯಾಕುಮಾರಿಯಿಂದ ದಿಲ್ಲಿಗೆ ಚಲಿಸುವ ರೈಲಿಗೆ ‘ವಾಜಪೇಯಿ ಎಕ್ಸ್ ಪ್ರೆಸ್’ ಎಂದು ನಾಮಕರಣ ಮಾಡಿ ಸತ್ಪುರುಷ ಅಟಲ್ ಜೀ ರವರಿಗೆ ಗೌರವ ಸಮರ್ಪಿಸಬೇಕೆಂದು ಕಾರ್ಯಕ್ರಮದ ಮೂಲಕ‌ ಈ ಸಂದೇಶವನ್ನು ಸಾರಿದರು

ಇದೇ ಸಂದರ್ಭದಲ್ಲಿ ಬಿಜೆಪಿ ಹಿಂದುಳಿದ ವರ್ಗದ ಮೋರ್ಚಾ ಅಧ್ಯಕ್ಷ ಜೋಗಿ ಮಂಜು ,ಪ್ರಜ್ಞಾವಂತ ನಾಗರಿಕ ವೇದಿಕೆಯ ಸುಚೀಂದ್ರ ,ಚಕ್ರಪಾಣಿ ,ನವೀನ್ ,ಮುಕೇಶ್, ಮಹದೇವ್ ,ಹಿರಿಯ ನಾಗರಿಕರಾದ ಬೈಲಪ್ಪ, ಮಹದೇವಸ್ವಾಮಿ ,ತ್ಯಾಗರಾಜು ,ಹಾಗೂ ಇನ್ನಿತರರು ಹಾಜರಿದ್ದರು

Key words: Former Prime Minister -Atal Bihari Vajpayee-3rd year-  Commemoration- program-mysore.