ಹಾಸನ,ಜುಲೈ,30,2026 (www.justkannada.in): ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರ 11ನೇ ದಿನದ ಕಾರ್ಯ ಇಂದು ನೆರವೇರುತ್ತಿದೆ.
ಹಾಸನ ಜಿಲ್ಲೆ ಹೊಳೇನರಸೀಪುರ ತಾಲ್ಲೂಕಿನ ಮಾವಿನಕೆರೆ ಬೆಟ್ಟದ ತಪ್ಪಲಿನಲ್ಲಿರುವ ಪತ್ನಿ ಚೆನ್ನಮ್ಮ ಸಮಾಧಿಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಹಾರ ಹಾಕಿ ಪೂಜೆ ಸಲ್ಲಿಸಿದರು. ಹಾಗೆಯೇ ಕುಟುಂಬಸ್ಥರು ಸಹ ಸಮಾಧಿಗೆ ಪೂಜೆ ಸಲ್ಲಿಸಿದರು.
ಚೆನ್ನಮ್ಮ ಅವರ 11ನೇ ದಿನದ ಕಾರ್ಯಕ್ಕೆ ಲಕ್ಷಕ್ಕೂ ಅಧಿಕ ಮಂದಿ ಆಗಮಿಸುವ ನಿರೀಕ್ಷೆ ಇದ್ದು, ಪಾರ್ಕಿಂಗ್ ವ್ಯವಸ್ಥೆ, ಊಟಕ್ಕಾಗಿ ಪ್ರತ್ಯೇಕ ಆಸನ ಮತ್ತು ಕೌಂಟರ್ ತೆರೆಯಲಾಗಿದೆ. ಸುಮಾರು ಆರು ವಿಧದ ಸಿಹಿ ತಿಂಡಿ ಸೇರಿ ಅಡುಗೆ ತಯಾರಾಗುತ್ತಿದೆ. ಸಾಮಾನ್ಯರು, ಗಣ್ಯರು ಸೇರಿದಂತೆ ಪ್ರತ್ಯೇಕವಾಗಿ 16 ಕೌಂಟರ್ ತೆರಲಾಗಿದೆ.
Key words: Chennamma, death, 11th day, Former PM, HD Devegowda







