ಅಂದು ಮೈತ್ರಿ ಸರ್ಕಾರ ಪತನಗೊಂಡಿದ್ದು ಖರ್ಗೆಯಿಂದಲ್ಲ- ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ.

ವದೆಹಲಿ,ಫೆಬ್ರವರಿ,8,2024(www.justkannada.in): ಅಂದು ಮೈತ್ರಿ ಸರ್ಕಾರ ಪತನಗೊಂಡಿದ್ದು ಮಲ್ಲಿಕಾರ್ಜುನ ಖರ್ಗೆಯಿಂದಲ್ಲ. ಕುಮಾರಸ್ವಾಮಿಯನ್ನ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದು ಮಲ್ಲಿಕಾರ್ಜುನ ಖರ್ಗೆಯಲ್ಲ, ಕಾಂಗ್ರೆಸ್ ಕೆಲ ನಾಯಕರಿಂದ ಮೈತ್ರಿ ಸರ್ಕಾರ ಉರುಳಿತು ಎಂದು ಜೆಡಿಎಸ್​​​ನ ರಾಜ್ಯಸಭಾ ಸದಸ್ಯ ಎಚ್​​​.ಡಿ. ದೇವೇಗೌಡರು ಹೇಳಿದರು.

ರಾಜ್ಯಸಭೆಯಲ್ಲಿ ಮಾತನಾಡಿದ  ಹೆಚ್.ಡಿ ದೇವೇಗೌಡರು, ಅಂದು ಮಲ್ಲಿಕಾರ್ಜುನ ಖರ್ಗೆಗೆ ಸಿಎಂ ಆಗುವ ಅವಕಾಶವಿತ್ತು. ನಾನು ಕೂಡ ಹಾಗೆಯೇ ಹೇಳಿದ್ದೆ. ಆದರೆ ಹೈಕಮಾಂಡ್ ಹೆಚ್.ಡಿಕೆಗೆ ಸಿಎಂ ಆಗಲು ಅವಕಾಶ ನೀಡಿದರು. ಕುಮಾರಸ್ವಾಮಿಯನ್ನ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದಾಗ ಬಿಜೆಪಿ ಜೊತೆಗೆ ಮೈತ್ರಿಯಾಗಿ ಕುಮಾರಸ್ವಾಮಿಯನ್ನ ಸಿಎಂ ಮಾಡ್ತೀವಿ ಅಂತ ಇದೇ ಬಿಜೆಪಿಯವರು ಹೇಳಿದ್ದರು ಎಂದು ತಿಳಿಸಿದರು.

10 ವರ್ಷ ದೇಶವನ್ನ ಮುನ್ನಡೆಸಿದ್ದ ಮನಮೋಹನ್ ಸಿಂಗ್ ಅವರನ್ನ ಅಳುವಂತೆ ಮಾಡಿದ್ದು ಇದೇ ಕಾಂಗ್ರೆಸ್ ಪಕ್ಷ. ನನಗೆ ಬಿಜೆಪಿಯಿಂದ ಯಾವುದೇ ಪರ್ಸನಲ್ ಬೆನಿಫಿಟ್ ಇಲ್ಲ. ನಾನು ಪ್ರಧಾನಿಯವರ ಕಚೇರಿಗೆ ಹೋದಾಗ ಅವರು ತೋರಿಸುವ ಪ್ರೀತಿಯಷ್ಟೆ ಸಾಕು ಎಂದು ಹೆಚ್.ಡಿ ದೇವೇಗೌಡರು ತಿಳಿಸಿದರು.

Key words: Former PM-H. D. Deve Gowda – alliance government- fell not -because of Kharge.