Saturday, September 19, 2026

BDA Apartments

Home Front Page ಕಾಂಗ್ರೆಸ್ ನಿಂದಲೇ ನಮಗೆ ಹೆಚ್ಚು ಅನ್ಯಾಯ ಎಂಬ ಹೆಚ್.ಡಿಕೆ ಆರೋಪಕ್ಕೆ ಮಾಜಿ ಸಂಸದ ಆರ್.ಧೃವನಾರಾಯಣ್ ತಿರುಗೇಟು…

ಕಾಂಗ್ರೆಸ್ ನಿಂದಲೇ ನಮಗೆ ಹೆಚ್ಚು ಅನ್ಯಾಯ ಎಂಬ ಹೆಚ್.ಡಿಕೆ ಆರೋಪಕ್ಕೆ ಮಾಜಿ ಸಂಸದ ಆರ್.ಧೃವನಾರಾಯಣ್ ತಿರುಗೇಟು…

ಮೈಸೂರು,ಡಿಸೆಂಬರ್,5,2020(www.justkannada.in):  ಕಾಂಗ್ರೆಸ್ ನಿಂದಲೇ ನಮಗೆ ಹೆಚ್ಚು ಅನ್ಯಾಯ ತೊಂದರೆ ಆಗಿದೆ. ಕಾಂಗ್ರೆಸ್ ಜೊತೆ ಕೈ ಜೋಡಿಸಿದ ಕಾರಣ ನಮ್ಮ ಶಕ್ತಿ ಕುಂದಿತು ಎಂದು ಆರೋಪ ಮಾಡಿದ ಮಾಜಿ ಸಿಎಂ ಎಚ್ ಡಿ.ಕುಮಾರಸ್ವಾಮಿಗೆ ಮಾಜಿ ಸಂಸದ ಧೃವನಾರಾಯಣ್ ತಿರುಗೇಟು ನೀಡಿದ್ದಾರೆ.logo-justkannada-mysore

ಮೈಸೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಂಸದ ಧೃವನಾರಾಯಣ್, ಜೆಡಿಎಸ್ ಪಕ್ಷದವರು ಅವಕಾಶವಾದಿಗಳು. ಜೆಡಿಎಸ್ ನವರು ಬೇಕಾದ ರೀತಿ ಚೇಂಚ್ ಆಗ್ತಾರೆ. ಆದರೆ ನಾವು ಸೆಕ್ಯೂಲರ್ ಸಿದ್ದಾಂತದಲ್ಲಿ ನಂಬಿಕೆ ಇಟ್ಟವರು. ಆದರೆ ಜೆಡಿಎಸ್ ನವರು ಅವಕಾಶವಾದಿಗಳು ಎಂದು ಕಿಡಿಕಾರಿದರು.

ಸಮ್ಮಿಶ್ರ ಸರ್ಕಾರದ ವೇಳೆ ನಾವು ಅವರಿಗೆ ಸಾಕಷ್ಟು ಬೆಂಬಲ ಕೊಟ್ಟವು. ಅವರು ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅಧಿಕಾರ ಕಳೆದುಕೊಂಡ್ರು. ನಾವು ಕುಮಾರಸ್ವಾಮಿ ಜೊತೆ ಕೊನೆಯವರೆಗೂ ಬೆನ್ನಿಗೆ ನಿಂತವು. ಆದರೆ ಅವರು ಅದನ್ನ ಉಳಿಸಿಕೊಳ್ಳಲಿಲ್ಲ ಎಂದು ಮಾಜಿ ಸಂಸದ ಧೃವನಾರಾಯಣ್ ವಾಗ್ದಾಳಿ ನಡೆಸಿದರು.Former MP -R. Dhruvanarayan – HD kumarasamy- Congress-mysore

ಇಂದು ಮೈಸೂರಿನಲ್ಲಿ ಸುದ್ಧಿಗೋಷ್ಟಿ ನಡೆಸಿ ಕಾಂಗ್ರೆಸ್ ಮತ್ತು ಸಿದ್ಧರಾಮಯ್ಯ  ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆರೋಪ ಮಾಡಿದ್ದರು. ನಾನು ಹಿಂದೆ ಸಿಎಂ ಆಗಿದ್ದಾಗ ಬಂದ ಒಳ್ಳೆ ಹೆಸರು ಇತ್ತು. ಸಿದ್ದರಾಮಯ್ಯ ಅಂಡ್ ಟೀಂ ಹಾಳು ಮಾಡಿದರು. ಪ್ರೀಪ್ಲ್ಯಾನ್ ಮಾಡಿ ನನ್ನ ಹೆಸರು ಹಾಳು ಮಾಡಿದರು ಕಾಂಗ್ರೆಸ್‌ನಿಂದಲೇ ಎಲ್ಲವೂ ಸರ್ವನಾಶವಾಯಿತು.ಎಮೋಷನಲ್ ಟ್ರ್ಯಾಪ್‌ಗೆ ನಾವು ಬಲಿಯಾದೆವು. ಕಾಂಗ್ರೆಸ್ ಜೊತೆ ಕೈ ಜೋಡಿಸಿದ ಕಾರಣ ನಮ್ಮ ಶಕ್ತಿ ಕುಂದಿತು. ಸಿದ್ದರಾಮಯ್ಯ ಅವರು ಅಪಪ್ರಚಾರ ಮಾಡಿದರು ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

Key words: Former MP -R. Dhruvanarayan – HD kumarasamy- Congress-mysore