Friday, September 11, 2026

BDA Apartments

ಕ್ಯಾನ್ಸರ್ ಆರೈಕೆಯನ್ನು ಹೆಚ್ಚಿಸಲು ” ಆಂಕೊ ಕೇರ್” ಎಂಬ ಹೊಸ ಮೊಬೈಲ್ ಅಪ್ಲಿಕ...
Home Front Page ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ಬಿಜೆಪಿಗೆ ಸೇರ್ಪಡೆ.

ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ಬಿಜೆಪಿಗೆ ಸೇರ್ಪಡೆ.

ಬೆಂಗಳೂರು,ಏಪ್ರಿಲ್,5,2023(www.justkannada.in):  ಮಂಡ್ಯದ ಪ್ರಭಾವಿ ನಾಯಕ, ಮಾಜಿ ಸಂಸದ  ಶಿವರಾಮೇಗೌಡ ಇಂದು ಬಿಜೆಪಿ ಸೇರ್ಪಡೆಯಾದರು.

ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ  ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಶಿವರಾಮೇಗೌಡ ಬಿಜೆಪಿಗೆ ಸೇರ್ಪಡೆಯಾದರು.  ಎಲ್‌ ಆರ್‌  ಶಿವರಾಮೇಗೌಡ ಪುತ್ರ ಚೇತನ್ ಸೇರಿದಂತೆ ನಾಗಮಂಗಲ ಕ್ಷೇತ್ರ ವಿವಿಧ ಪಕ್ಷಗಳ ಮುಖಂಡರು ಸಹ ಬಿಜೆಪಿ ಸೇರ್ಪಡೆಯಾದರು.

ಜೆಡಿಎಸ್‌‌ನಿಂದ ಉಚ್ಚಾಟನೆಯಾದ ಬಳಿಕ ಶಿವರಾಮೇಗೌಡ ಪಕ್ಷೇತರ ಸ್ಪರ್ಧೆಗೆ ತಯಾರಿ ನಡೆಸಿದ್ದರು. ನಾಗಮಂಗಲ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಶಿವರಾಮೇಗೌಡರು ಹಳ್ಳಿ ಹಳ್ಳಿಗಳನ್ನ ಸುತ್ತುತ್ತಿದ್ದರು. ಇದೀಗ ಮಂಡ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಟಕ್ಕರ್ ಕೊಡಲು ಶಿವರಾಮೇಗೌಡಗೆ ಬಿಜೆಪಿ ಗಾಳ ಹಾಕಿದ್ದು ಟಿಕೆಟ್ ಭರವಸೆಯೊಂದಿಗೆ ಅಧಿಕೃತವಾಗಿ ಇಂದು ಶಿವರಾಮೇಗೌಡ ಬಿಜೆಪಿ ಸೇರ್ಪಡೆಯಾಗಿದ್ದಾರೆ.ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ಬಿಜೆಪಿಗೆ ಸೇರ್ಪಡೆ lr shivaramegowda

ಕಳೆದ ಮೂರು ದಿನದ ಹಿಂದೆ ಬಿಜೆಪಿ ಸೇರಲು ಶಿವರಾಮೇಗೌಡ ನಿರ್ಧರಿಸಿದ್ರು. ಕೊನೆ ಕ್ಷಣದಲ್ಲಿ ಪಕ್ಷ ಸೇರ್ಪಡೆಗೆ ಬ್ರೇಕ್ ಬಿದ್ದಿದ್ದು, ಕೋರ್ ಕಮಿಟಿ ಸಭೆ ಸಮಯದ ಅಭಾವ ಹಾಗೂ ಟಿಕೆಟ್ ಸಿಗುವ ಭರವಸೆ ಸಿಗದ ಹಿನ್ನಲೆ ಶಿವರಾಮೇಗೌಡ ಬಿಜೆಪಿ ಸೇರ್ಪಡೆಯಾಗಿರಲಿಲ್ಲ. ಇದೀಗ ನಾಗಮಂಗಲ ಟಿಕೆಟ್ ಭರವಸೆ ಸಿಗುತ್ತಿದ್ದಂತೆ  ಶಿವರಾಮೇಗೌಡರು ಕಮಲ ಹಿಡಿದಿದ್ದಾರೆ.

Key words: Former MP- LR Shivaramegowda- joins- BJP.