ಮಂಡ್ಯ,ಆಗಸ್ಟ್,16,2025 (www.justkannada.in): ಧರ್ಮಸ್ಥಳ ಕ್ಷೇತ್ರದ ವಿರುದ್ದ ಅಪಪ್ರಚಾರ ನಡೆಯುತ್ತಿದೆ. ಷಡ್ಯಂತ್ರ ನಡೆಯುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದು ಈ ನಡುವೆ ಬಿಜೆಪಿ ನಾಯಕರ ಧರ್ಮಸ್ಥಳ ಚಲೋ ಕೈಗೊಂಡಿರುವ ವಿಚಾರ ಕುರಿತು ಮಾಜಿ ಸಂಸದ ಡಿ.ಕೆ ಸುರೇಶ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿದ ಡಿ.ಕೆ ಸುರೇಶ್, ಇದು ರಾಜಕೀಯ ವಸ್ತು ಅಲ್ಲ ಧರ್ಮ ನಂಬಿಕೆಯ ವ್ಯವಸ್ಥೆ ಮಂಜುನಾಥನು ನಂಬಿದವರನ್ನು ಕೈ ಬಿಡಲ್ಲ ಎಂಬ ವಿಶ್ವಾಸವಿದೆ. ಶೀಘ್ರದಲ್ಲೇ ರಾಜ್ಯದ ಜನತೆಗೆ ತನಿಖೆಯ ವಿಚಾರ ತಿಳಿಸುತ್ತಾರೆ ಎಂದರು.
ಮಂಜುನಾಥ ಸ್ವಾಮಿಯ ಭಕ್ತರು ಎಲ್ಲಾ ಕಡೆಯೂ ಇದ್ದಾರೆ. ಹೀಗಾಗಿ ಅಪಕೀರ್ತಿ ಆಗದಂತೆ ನೋಡಿಕೊಳ್ಳಬೇಕಾಗಿರುವುದು ಕರ್ತವ್ಯ. ಆರೋಪಗಳನ್ನ ಸಾರ್ವಜನಿಕರ ಮುಂದಿಡಲು ತನಿಖೆ ನಡೆಯುತ್ತಿದೆ. ತನಿಖೆಯಿಂದ ಸತ್ಯಾಸತ್ಯತೆ ಹೊರಬರುತ್ತದೆ. ಸಿಎಂ, ಡಿಸಿಎಂ ಈಗಾಗಲೇ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ ಎಂದು ಡಿ.ಕೆ ಸುರೇಶ್ ಹೇಳಿದರು.
Key words: Former MP, D.K. Suresh ,BJP , Dharmasthala Chalo