ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಮಾಜಿ ಶಾಸಕ ಯು.ಬಿ ಬಣಕಾರ್.

ಬೆಂಗಳೂರು,ನವೆಂಬರ್,21,2022(www.justkannada.in):  ವಿಧಾನಸಭೆ ಚುನಾವಣೆ  ಹತ್ತಿರವಾಗುತ್ತಿರುವಾಗಲೇ ರಾಜ್ಯದಲ್ಲಿ ಪಕ್ಷಾಂತರ ಪರ್ವ ಶುರುವಾಗಿದ್ದು ಇತ್ತೀಚೆಗೆ ಬಿಜೆಪಿಗೆ ಗುಡ್ ಬೈ ಹೇಳಿದ್ದ ಯು.ಬಿ ಬಣಕಾರ್ ಇದೀಗ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಯು.ಬಿ ಬಣಕಾರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇತ್ತೀಚೆಗಷ್ಟೆ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ಮಾಜಿ ಶಾಸಕ ಯು.ಬಿ.ಬಣಕಾರ್‌ ರಾಜೀನಾಮೆ ನೀಡಿದ್ದರು.

ಕಾಂಗ್ರೆಸ್ ಸೇರಿದ ಬಳಿಕ ಮಾತನಾಡಿದ ಯು.ಬಿ ಬಣಕಾರ್, ನಾನು ಬಿಜೆಪಿ ಬಿಡಲು ಬಿ.ಸಿ ಪಾಟೀಲ್ ಕಾರಣ.  ಬಿಜೆಪಿ ಬಿಡುವ ರೀತಿ ಬಿ.ಸಿ ಪಾಟೀಲ್ ನಡೆದುಕೊಂಡರು.  ನಾನು ಸಚಿವರಿಗೆ ಗೌರವ ಕೊಟ್ಟಿದ್ದೇನೆ.  ಸಚಿವರೇ ನನ್ನನ್ನ ಅಗೌರವದಿಂದ ನಡೆಸಿಕೊಂಡರು. ನನಗೆ ಕಾಂಗ್ರೆಸ್ ಸೇರುವ ಉದ್ಧೇಶ ಇರಲಿಲ್ಲ. ಕಾಂಗ್ರೆಸ್  ಮೂಲಕ ನನ್ನ ರಾಜಕೀಯ ನಡೆಯಲಿದೆ ಎಂದರು.

ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಹಾವೇರಿ ಜಿಲ್ಲೆ ಹಿರೇಕೆರೂರು ಕ್ಷೇತ್ರದ ಮಾಜಿ ಶಾಸಕ ಬಣಕಾರ್,  ಎದುರಾಳಿಯಾಗಿದ್ದ ಬಿ.ಸಿ. ಪಾಟೀಲ್ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಬಣಕಾರ್ ಅವರನ್ನು ಸಮಾಧಾನಪಡಿಸಲು ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನದ ಜೊತೆಗೆ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ನಿರ್ದೇಶಕರನ್ನಾಗಿ ಮಾಡಲಾಗಿತ್ತು.

Key words: Former MLA -UB Bankar- left -BJP – joined- Congress.