ಸಾಕ್ಷ್ಯ ಸಿಗಬಾರದೆಂದು ಮೃತ ರಾಜಶೇಖರ್ ದೇಹ ಸುಟ್ಟಿದ್ದಾರೆ- ಶ್ರೀರಾಮುಲು ಗಂಭೀರ ಆರೋಪ

ಬಳ್ಳಾರಿ,ಜನವರಿ,7,2026 (www.justkannada.in):  ಬಳ್ಳಾರಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಾಜಿ ಸಚಿವ ಶ್ರೀರಾಮುಲು ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.

ಪ್ರಕರಣ ಕುರಿತು ಮಾತನಾಡಿರುವ ಮಾಜಿ ಸಚಿವ ಶ್ರೀರಾಮುಲು,  ಸಾಕ್ಷಿ ಸಿಗಬಾರದೆಂದು ಕಾಂಗ್ರೆಸ್ ಕಾರ್ಯಕರ್ತ ಮೃತ ರಾಜಶೇಖರ್ ದೇಹ ಸುಟ್ಟಿದ್ದಾರೆ.  ರಾಜಶೇಖರ್ ದೇಹದಲ್ಲಿ ಬಹಳಷ್ಟು ಗುಂಡುಗಳಿದ್ದಾವೆ. ಆದರೆ ಸಾಕ್ಷಿ ಸಿಗಬಾರದೆಂದು ದೇಹ ಸುಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಜಶೇಖರ್ ತಂದೆ ಮೃತಪಟ್ಟಾಗ ಮಣ್ಣಲ್ಲಿ ಹೂತಿದ್ದರು.  ರಾಜಶೇಖರ್  ಅನ್ನೂ ಹೂಳಲು ಗುಂಡಿ ತೆಗೆದಿದ್ದರು. ಆದರೆ ಬಳಿಕ ಅದನ್ನ ಮುಚ್ಚುತ್ತಾರೆ.  ರಾಜಶೇಖರ್ ಕುಟುಂಬದವರನ್ನ ಹೆದರಿಸಿ ಬೆದರಿಸಿದ್ದಾರೆ. ಇವತ್ತಲ್ಲ ನಾಳೆ ಸತ್ಯ ಹೊರಬರುತ್ತೆ ಎಂದು ಶ್ರೀರಾಮುಲು ತಿಳಿಸಿದ್ದಾರೆ.

Key words: Sriramulu,  alleges, Rajashekhar, body, burned, prevent, evidence