ಬಳ್ಳಾರಿ ಫೈರಿಂಗ್ ಕೇಸ್: CBI ತನಿಖೆಗೆ ಮಾಜಿ ಸಚಿವ ಶ್ರೀರಾಮುಲು ಒತ್ತಾಯ

ಬಳ್ಳಾರಿ,ಜನವರಿ,2,2026 (www.justkannada.in):  ಬಳ್ಳಾರಿಯಲ್ಲಿ ಬ್ಯಾನರ್ ಕಟ್ಟುವಾಗ ನಡೆದ ಗಲಾಟೆಯಲ್ಲಿ ಫೈರಿಂಗ್ ಮಾಡಿದ ಹಿನ್ನೆಲೆಯಲ್ಲಿ  ಕಾಂಗ್ರೆಸ್ ಕಾರ್ಯಕರ್ತ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಮಾಜಿ ಸಚಿವ ಶ್ರೀರಾಮುಲು ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ.

ಈ ಕುರಿತು ಶಾಸಕ ಜನಾರ್ದನ ರೆಡ್ಡಿ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಮಾಜಿ ಸಚಿವ ಶ್ರೀರಾಮುಲು, ಗಲಾಟೆಯಲ್ಲಿ ಕೈ ಕಾರ್ಯಕರ್ತ ರಾಜಶೇಖರ್ ಮೃತಪಟ್ಟಿದ್ದಾರೆ.  ರಾಜಶೇಖರ್ ಕುಟುಂಬದವರು ಎಷ್ಟು ಕನಸು ಇಟ್ಟುಕೊಂಡಿದ್ದರೋ.  ದೇವರು ಆ ಕುಟುಂಬಕ್ಕೆ ದುಃಖ ಭರಿಸಲಿ. ಕ್ಷುಲ್ಲಕ ಕಾರಣಕ್ಕೆ ಗಲಾಟೆ ಅಂತಾ ಕಾಂಗ್ರೆಸ್ ನವರು ಹೇಳುತ್ತಾರೆ. ಇಲ್ಲಿ ಬ್ಯಾನರ್ ಕಟ್ಟಬೇಡಿ ಎಂದು ಜನಾರ್ದನರೆಡ್ಡಿ ಹೇಳಿದ್ದರು ಆದರೆ ಅವರು ಮಾತು ಕೇಳಲಿಲ್ಲ.  ಸಿನಿಮಾದ ರೀತಿ ಬಾಡಿಗಾರ್ಡ್ ಗಳು ಫೈರಿಂಗ್ ಮಾಡಿದ್ರು ಫೈರಿಂಗ್ ಮಾಡಲು ಅವಕಾಶ ಕೊಟ್ಟದ್ದು ಯಾರು?   ಮಳೆ ಸುರಿದಂತೆ ಕಲ್ಲುಗಳನ್ನ ಸುರಿದರು ಎಂದು ಆರೋಪಿಸಿದರು.

ಸತೀಶ್ ರೆಡ್ಡಿಗೆ ಸರ್ಕಾರ ಸೆಕ್ಯೂರಿಟಿ ಕೊಡುತ್ತೆ  ಬಿಹಾರದ ರೀತಿ ಕರ್ನಾಟಕದಲ್ಲಿ ಆಗಿದೆ. ಖಾಸಗಿ ಗನ್ ಮ್ಯಾನ್ ನಿಂದಲೇ ಫೈರಿಂಗ್ ಆಗಿದೆ ಭರತ್ ರೆಡ್ಡಿ ಕಡೆಯವರಿಂದಲೇ ಫೈರಿಂಗ್ ಆಗಿದೆ ಹೋರಾಟದ ರೀತಿ ಫೈರಿಂಗ್ ಮಾಡಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಈ ಕೃತ್ಯ ನಡೆದಿದೆ. ಸಾರ್ವಜನಿಕ ಸ್ಥಳದಲ್ಲಿ ಫೈರಿಂಗ್ ಮಾಡಲು ಸರ್ಕಾರ ಅವಕಾಶ ಕೊಟ್ಟಿತ್ತಾ?  ಅಟೋಗಳಲ್ಲಿ ಪೆಟ್ರೋಲ್ ಬಾಂಬ್  ತಂದಿದ್ರು . ಇದನ್ನೆಲ್ಲ ನೋಡುತ್ತಿದ್ದರೇ ಪ್ಲಾನ್ ಮಾಡಿ ಮಾಡಿದ್ದಾರೆ ಎಂದು ಕಿಡಿಕಾರಿದರು.

ಘಟನೆ ಕುರಿತು ಹೈಕೋರ್ಟ್ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆಯಾಗಲಿ ಇಲ್ಲ ಸಿಬಿಐ ತನಿಖೆಗೆ ಕೊಡಲಿ. ಸತ್ಯ ಏನು ಅಂತಾ ಹೊರಬರಲಿ ಎಂದು ಶ್ರೀರಾಮುಲು ಒತ್ತಾಯಿಸಿದರು.

Key words: Bellary, firing case, Former minister, Sriramulu, CBI, investigation