ತುಮಕೂರು ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ- ಮಾಜಿ ಸಚಿವ ಸೊಗಡು ಶಿವಣ್ಣ.

ಬೆಂಗಳೂರು,ಏಪ್ರಿಲ್,18,2023(www.justkannada.in):  ಬಿಜೆಪಿಯಿಂದ ಟಿಕೆಟ್ ಕೈತಪ್ಪಿದ ಹಿನ್ನೆಲೆ ತುಮಕೂರು ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಮಾಜಿ ಸಚಿವ ಸೊಗಡು ಶಿವಣ್ಣ ತಿಳಿಸಿದ್ದಾರೆ.

ಈ ಕುರಿತು ತುಮಕೂರು ನಗರದಲ್ಲಿ ಮಾತನಾಡಿದ ಮಾಜಿ ಸಚಿವ ಸೊಗಡು ಶಿವಣ್ಣ, ನಾನು ತುಮಕೂರು ಕ್ಷೇತ್ರ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ. 1994ರಿಂದ ಕಪ್ಪು ಚುಕ್ಕೆ ಇಲ್ಲದೆ ರಾಜಕಾರಣ ಮಾಡಿದ್ದೇನೆ. ಶಾಂತಿ ಕಾಯಕ ಸಮಾನ ಮಂತ್ರ ಮೂಲಕ ಮತ ಕೇಳುತ್ತೇನೆ. ಪಕ್ಷದಲ್ಲಿ ಇದ್ದಾಗ ಎಲ್ಲಾ ಸಹಿಸಿಕೊಳ್ಳಬೇಕಿತ್ತು ಸಹಿಸಿಕೊಂಡಿದ್ದೇನೆ . ಎಲ್ಲಾ ಪಕ್ಷದ ನಾಯಕರು ನ ನ್ನಜೊತೆ ಚೆನ್ನಾಗಿ ಇದ್ದಾರೆ  ಎಂದರು.

Key words: former minister Sogadu Sivanna- will -contest – independent candidate – Tumkur