ಅನರ್ಹ ಶಾಸಕರ ಕುರಿತು ಹೊಸ ಬಾಂಬ್ ಸಿಡಿಸಿದ ಮಾಜಿ ಸಚಿವ ಶಿವರಾಜ್ ತಂಗಡಗಿ…

ಕೊಪ್ಪಳ,ಜು,29,2019(www.justkannada.in): ಅತೃಪ್ತ ಶಾಸಕರು ನಮ್ಮನ್ನು ಅನರ್ಹ ಮಾಡಬೇಡಿ. ನಾವು ಬರ್ತೀವಿ ಅಂತಾ ಸಿದ್ದರಾಮಯ್ಯನವರಿಗೆ ಕರೆ ಮಾಡಿದ್ರೂ. ಸಿದ್ದರಾಮಯ್ಯನವರ ಜೊತೆ ನಾನು ಇದ್ದಾಗ ಅತೃಪ್ತರೇಲ್ಲಾ ಕಾಲ್ ಮಾಡಿದ್ದರು ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಹೊಸ ಬಾಂಬ್ ಸಿಡಿಸಿದ್ದಾರೆ.

ಕೊಪ್ಪಳದಲ್ಲಿ ಇಂದು ಮಾತನಾಡಿದ ಮಾಜಿ ಸಚಿವ ಶಿವರಾಜ್ ತಂಗಡಗಿ, ಅತೃಪ್ತರನ್ನು ಬೀದಿಗೆ ನಿಲ್ಲುವಂತಹ ಸ್ಥಿತಿ ಇಂದು ಬಿಜೆಪಿ ಮಾಡಿದೆ. ಬಿಜೆಪಿಯವರು ಪಕ್ಕದ ಮನೆಯವರ ಮಗುವನ್ನು ನಮ್ಮ‌ಮಗು ಅಂತಾ ನಾಮಕರಣ ಮಾಡ್ತಾ ಇದ್ದಾರೆ. ತಮ್ಮನ್ನ ನಂಬಿದವರನ್ನು ಬೀದಿಗೆ ನಿಲ್ಲಿಸಿ ಇದೀಗ ಬಿಜೆಪಿ ಸೇಫ್ ಆಗಿದೆ. ಅತೃಪ್ತರನ್ನು ಅನರ್ಹ ಮಾಡಿದ್ರೆ ಬಿಜೆಪಿಗೆ ಯಾಕಿಷ್ಟೂ ತ್ರಾಸ್ ಆಗೈತಿ. ಮತ್ತೊಬ್ಬರನ್ನು ಹಾಳು ಮಾಡಿ ಬಿಜೆಪಿ ಸರ್ಕಾರ ಮಾಡ್ತಾ ಇದೆ. ಬಿಜೆಪಿಯವರಿಗೆ ನಾಚಿಕೆ ಮಾನ ಮರ್ಯಾದೆ ಇಲ್ಲ ಎಂದು ಕಿಡಿಕಾರಿದರು.

ಅತೃಪ್ತರಿಂದ ತಮ್ಮ ಮಾನ ಮುಚ್ಚಿಕೊಳ್ಳುವುದಕ್ಕೆ ಸಿದ್ದರಾಮಯ್ಯನವರ ಹೆಸರು ಹೇಳ್ತಾ ಇದ್ದಾರೆ. ಸಿದ್ದರಾಮಯ್ಯನವರು ಯಾರನ್ನು ಕಳಿಸಿಲ್ಲ. ಅತೃಪ್ತರ ಚಟುವಟಿಕೆಯಿಂದ ಸಿದ್ದರಾಮಯ್ಯ ತುಂಬಾ ನೊಂದಿದ್ದಾರೆ. ಅತೃಪ್ತರನ್ನು ನಮ್ಮನ್ನು ಅನರ್ಹ ಮಾಡಬೇಡಿ ಎಂದು ಕರೆ ಮಾಡಿದ್ದರು. ನಾವು ಬರ್ತೀವಿ ಅಂತಾ ಸಿದ್ದರಾಮಯ್ಯನವರಿಗೆ ಕರೆ ಮಾಡಿದ್ದರು ಎಂದು ತಿಳಿಸಿದರು.

Key words: Former minister -Shivraj Thangadagi – new bomb – rebel-MLAs.