Monday, October 12, 2026

Dasara Wishes

BJP DasraWishes_JK DasraWishes JK
Happy Dasara
Home Front Page ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಮಾಜಿ ಸಚಿವ ಸಾ.ರಾ ಮಹೇಶ್: ಕಾರಣವೇನು ಗೊತ್ತೆ…?

ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಮಾಜಿ ಸಚಿವ ಸಾ.ರಾ ಮಹೇಶ್: ಕಾರಣವೇನು ಗೊತ್ತೆ…?

ಮೈಸೂರು,ಅ,16,2019(www.justkannada.in): ಮಾಜಿ ಸಚಿವ ಹಾಗೂ ಜೆಡಿಎಸ್ ಶಾಸಕ ಸಾ.ರಾ ಮಹೇಶ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಈ ಬಗ್ಗೆ ಸ್ವತಃ ಅವರೇ ಬಹಿರಂಗ ಪಡಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಾಜಿ ಸಚಿವ ಸಾ.ರಾ ಮಹೇಶ್ ನನ್ನನ್ನು ಚಾಮುಂಡಿ ಬೆಟ್ಟಕ್ಕೆ ಬರಲಿ ಅಂತ ಕರೆದಿದ್ದಾರೆ‌. ಇಂತಹ ದಿನಕ್ಕಾಗಿ ನಾನು ಕಾಯುತ್ತಿದ್ದೆ.  ಮೂರು ಬಾರಿ ನನ್ನ ಬಗ್ಗೆ ಮಾತನಾಡಿದ ನಂತರದಲ್ಲಿ ನಾನು ಮಾತನಾಡಿದ್ದೆ.ಶಾಸಕರ ಹಕ್ಕು ರಕ್ಷಣೆಗಾಗಿ ಮಾತನಾಡಿದ್ದೆ. ಈ ಎಲ್ಲಾ ವಿಚಾರಗಳಿಂದ  ಮಾನಸಿಕವಾಗಿ ನೊಂದು ಸೆಪ್ಟೆಂಬರ್ 18ರಂದೇ ನಾನು ರಾಜೀನಾಮೆ ಸಲ್ಲಿಸಿದ್ದೆ ಎಂದು  ಕಾರಣ ತಿಳಿಸಿದ್ದಾರೆ.

ರಾಜೀನಾಮೆ ಸಲ್ಲಿಸುವಾಗ ಸ್ಪೀಕರ್ ಕೇಂದ್ರ ಸ್ಥಾನದಲ್ಲಿ ಇಲ್ಲದ ಕಾರಣ ಕಾರ್ಯದರ್ಶಿಗೆ ರಾಜೀನಾಮೆ ರವಾನಿಸಿದ್ದೆ. ಆದರೆ ಸ್ಪೀಕರ್ ಬಂದ ನಂತರ ಮನವೊಲಿಸಿದ್ರು.‌ ಈಗಲೂ ನಾನು ರಾಜೀನಾಮೆ ವಾಪಸ್ ಪಡೆದಿಲ್ಲ ಎಂದು ತಮ್ಮ ರಾಜೀನಾಮೆ ವಿಚಾರವನ್ನ ಸಾ.ರಾ ಬಹಿರಂಗಪಡಿಸಿದ್ದಾರೆ.

Key words: Former minister-SA RA Mahesh – resigned-MLA-mysore