ಡಿ.ಕೆ ಶಿವಕುಮಾರ್ ವಿರುದ್ಧ ಆಡಿಯೋ ರಿಲೀಸ್ ಮಾಡಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ.

ಬೆಳಗಾವಿ,ಜನವರಿ,30,2023(www.justkannada.in):  ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರ ಆರೋಪ ಪ್ರತ್ಯಾರೋಪ ವಾಕ್ಸಮರ ಜೋರಾಗಿದ್ದು ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿದೆದ್ದಿದ್ದಾರೆ.

ಇಂದು ಬೆಳಗಾವಿಯ ಖಾಸಗಿ ಹೋಟೆಲ್ ನಲ್ಲಿ ಸುದ್ಧಿಗೋಷ್ಠಿ ನಡೆಸಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಅಕ್ರಮ ಆಸ್ತಿ ಸಂಪಾದನೆ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ವಿರುದ್ಧ ಆಡಿಯೋ ಬಾಂಬ್ ಸಿಡಿಸಿದ್ದಾರೆ.

ಡಿಕೆ ಶಿವಕುಮಾರ್ ಮಾತನಾಡಿದ್ದಾರೆ ಎನ್ನಲಾದ 18 ಸೆಕೆಂಡ್​ ಆಡಿಯೋವನ್ನ ರಮೇಶ್ ಜಾರಕಿಹೊಳಿ ಬಿಡುಗಡೆ ಮಾಡಿದ್ದಾರೆ. ನಮ್ಮ ಮನೆಯಲ್ಲಿ ರೇಡ್​​ ಆದಾಗ 45 ಕೋಟಿ ರೂ. ಸೀಜ್‌ ಆಗಿತ್ತು. ನನಗೆ ದುಬೈ, ಲಂಡನ್, ಮುಂಬೈನಲ್ಲಿ ಫ್ಲ್ಯಾಟ್​​ ಇದೆ. ನಮ್ಮ ಮನೆಯ ಮೇಲೆ ದಾಳಿ ಆದಾಗ ಹಣ ಸೀಜ್​​ ಆಗಿತ್ತು ಎಂದು ಮಾತನಾಡಿರುವುದು ಈ ಆಡಿಯೋದಲ್ಲಿದೆ.

Key words: Former minister -Ramesh Jarakiholi- released- audio -against -DK Shivakumar.