ಹಿರಿಯ ನ್ಯಾಯವಾದಿ ಪಾಲಿ.ಎಸ್.ನಾರಿಮನ್ ಅವರ ಸೇವೆ ಸ್ಮರಿಸಿದ ಮಾಜಿ ಸಚಿವ ಎಂ.ಬಿ ಪಾಟೀಲ್..

ವಿಜಯಪುರ,ಫೆಬ್ರವರಿ,26,2021(www.justkannada.in):  ಅಂತರ್ ರಾಜ್ಯ ನದಿ ವಿವಾದಗಳಲ್ಲಿ ಕರ್ನಾಟಕ ಸರ್ಕಾರದ ಪರವಾಗಿ ನ್ಯಾಯ ಮಂಡನೆ ಮಾಡುತ್ತಿದ್ದ ರಾಷ್ಟ್ರದ ಹಿರಿಯ ನ್ಯಾಯವಾದಿ ಪಾಲಿ.ಎಸ್.ನಾರಿಮನ್ ಅವರ ಸೇವೆಯನ್ನು ರಾಜ್ಯ ಸರ್ಕಾರ, ನಾಡಿನ ರೈತ ಸಮುದಾಯ ಸದಾ ಸ್ಮರಿಸಲೇ ಬೇಕು ಎಂದು ಮಾಜಿ  ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.jk

ಈ ಕುರಿತು  ಪ್ರಕಟಣೆ  ಹೊರಡಿಸಿ ಪಾಲಿ ಎಸ್. ನಾರಿಮನ್ ಅವರ ಸೇವೆ ಸ್ಮರಿಸಿದ ಮಾಜಿ ಸಚಿವ ಎಂ.ಬಿ ಪಾಟೀಲ್, 2013-2018 ಐದು ವರ್ಷಗಳ ಕಾಲ ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ನ್ಯಾಯವಾದಿ ನಾರಿಮನ್ ಅವರ ಸತತ ಸಂಪರ್ಕ ನನಗೆ ಬಂದಿತ್ತು. ಶಿಸ್ತು, ಬದ್ಧತೆ, ಪ್ರಾಮಾಣಿಕತೆಯಲ್ಲಿ ಅವರು ಇಡೀ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿಯೇ ಮಾದರಿಯಾಗಿದ್ದಾರೆ. ಕಾವೇರಿ ವಿವಾದದಲ್ಲಿ ಕರ್ನಾಟಕಕ್ಕೆ ನ್ಯಾಯ ದೊರಕಿದ್ದರೆ, ಅದರ ಶ್ರೇಯಸ್ಸು ನಾರಿಮನ್‍ ರಿಗೆ ಸಲ್ಲುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

former-minister-mb-patil-commemorated-services-senior-lawyer-pali-s-nariman
ಕೃಪೆ-internet

ಇಂತಹ ಅಪರೂಪದ ನ್ಯಾಯವಾದಿಗಳು ಕರ್ನಾಟಕದ ಪರ ದಶಕಗಳ ಕಾಲ ಕಾರ್ಯನಿರ್ವಹಿಸಿರುವುದು ಹಾಗೂ ರಾಜ್ಯಕ್ಕೆ ಯೋಗ್ಯ ನ್ಯಾಯ ದೊರಕಿಸಿ ಕೊಟ್ಟಿರುವುದು ಹೆಮ್ಮೆಯಾಗಿದೆ ಎಂದು ಎಂ.ಬಿ.ಪಾಟೀಲ್  ಹೇಳಿದರು.

Key words: Former Minister -MB Patil -commemorated – services -Senior lawyer- Pali S Nariman.