ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಬಗ್ಗೆ ಪರೋಕ್ಷ ಸುಳಿವು ನೀಡಿದ ಮಾಜಿ ಸಚಿವ ಮಾಧುಸ್ವಾಮಿ.

ತುಮಕೂರು, ಫೆಬ್ರವರಿ, 22,2024(www.justkannada.in):  ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆಸುವ  ಬಗ್ಗೆ ಮಾಜಿ ಸಚಿವ  ಜೆಸಿ ಮಾಧುಸ್ವಾಮಿ ಪರೋಕ್ಷ ಸುಳಿವು ನೀಡಿದ್ದಾರೆ.

ತುಮಕೂರು ಕ್ಷೇತ್ರದ ಬಿಜೆಪಿ ಟಿಕೆಟ್ ಗೆ ಬಿಜೆಪಿ ಹಿರಿಯ ನಾಯಕ  ವಿ.ಸೋಮಣ್ಣ ಮಾತ್ರವಲ್ಲದೆ ಜೆಸಿ ಮಾಧ್ಯಸ್ವಾಮಿ  ಕೂಡ ಆಕಾಂಕ್ಷಿಯಾಗಿದ್ದಾರೆ. ಇಂದು ಜಿಲ್ಲಾ ಬಿಜೆಪಿ ನೂತನ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಜೆ.ಸಿ ಮಾಧುಸ್ವಾಮಿ, ಕಳೆದುಕೊಂಡಿದ್ದನ್ನು ಈ ಚುನಾವಣೆಯಲ್ಲಿ ಪಡೆದುಕೊಳ್ಳಬೇಕಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಸುಳಿವು ನೀಡಿದ್ದಾರೆ.

ಚುನಾವಣೆಯಲ್ಲಿ 5-6 ಸಾವಿರ ವೋಟ್​ನಿಂದ ಸೋತಿದ್ದು ಮಹತ್ವವಲ್ಲ. ಮೋದಿ ಶಕ್ತಿ ಬಳಸಿಕೊಂಡು ಮುನ್ನಡೆಯಬೇಕು. ಇಂದು ಮತದಾರರ ನನಗೇನಾಯ್ತು ಅಂತ ಯೋಚನೆ ಮಾಡುತ್ತಿದ್ದಾರೆ. ಆದರೆ ನಾವು ರಾಷ್ಟ್ರಕ್ಕೆ ಏನಾಗಬೇಕು ಅಂತ ಚರ್ಚೆ ಮಾಡುತ್ತಿದ್ದೇವೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದು ಮಾಧುಸ್ವಾಮಿ ತಿಳಿಸಿದರು.

Key words: Former minister-Madhuswamy-hinted – contest – Lok Sabha elections.