ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಮಾಜಿ ಸಚಿವ ಹೆಚ್.ಸಿ ಮಹಾದೇವಪ್ಪ ವಿರೋಧ.

ಮೈಸೂರು,ಸೆಪ್ಟಂಬರ್,3,2021(www.justkannada.in ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸುವ ನಿರ್ಧಾರವಾಗಿದೆ. ಇದು ಗ್ರಾಮೀಣ, ಬಡ, ದಲಿತ, ದುರ್ಬಲ ವರ್ಗದವರ ವಿರೋಧ ನೀತಿಯಾಗಿದ್ದು ಯಾವುದೇ ಕಾರಣಕ್ಕೂ ಜಾರಿಯಾಗಬಾರದು ಎಂದು ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ಹೇಳಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ, ಶಿಕ್ಷಣ ನೀತಿಯಿಂದ ಆಗುವ ತೊಂದರೆಗಳ ಬಗ್ಗೆ ಪ್ರಧಾನ ಮಂತ್ರಿಗಳು ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದೆ. ಆತುರವಾಗಿ ಏಕಮುಖವಾಗಿ ತೀರ್ಮಾನ ಮಾಡದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಆದರೆ ತರಾತುರಿಯಲ್ಲಿ ರಾಜ್ಯ ಸರ್ಕಾರ ನೂತನ ನೀತಿ ಜಾರಿಗೆ ತರಲು ಹೊರಟಿದೆ.ರಾಧಾಕೃಷ್ಣನ್ ಕಮಿಟಿ ವರದಿಯಂತೆ 1968ರಲ್ಲಿ ಹೊಸ ಶಿಕ್ಷಣ ನೀತಿ ತಂದು ಜಾರಿ ಮಾಡಲಾಗಿತ್ತು. 20 ವರ್ಷಗಳ ನಂತರ 1986 ಕೊಟಾರಿಯಾ ಸಮಿತಿ ನೇಮಕ ಮಾಡಿ 1/3 ಫಾರಿನ್ ಮೆಂಬರ್ ಗಳೊಂದಿಗೆ ಸಮಗ್ರ ಶಿಕ್ಷಣ ನೀತಿ ಕೊಟ್ಟಿದ್ದರು. ಇಡೀ ದೇಶದಲ್ಲಿ ಏಕಮುಖ ಶಿಕ್ಷಣ ನೀತಿ ಇರಬೇಕು ಅಂತ ಒಂದು ಅಧ್ಯಯನ ಮಾಡಿ 3+2 ಶಿಕ್ಷಣ ನೀತಿ ಜಾರಿ ಮಾಡಿದ್ರು. ಭಾರತದ ದೇಶ ಬಡವರು, ಹೆಣ್ಣುಮಕ್ಳಳು, ಧೀನದಲಿತರ ಅನುಕೂಲವಾಗುವ  ಒಂದು ಶಿಕ್ಷಣ ನೀತಿ ಜಾರಿ ಮಾಡಿದರು.

ನೂತನ ಶಿಕ್ಷಣ ನೀತಿ 2020-21 ಪ್ರಕಾರ ಅಮೇರಿಕಾದ ಪ್ರೇರೇಪಿತರಾಗಿ ಶಿಕ್ಷಣ ನೀತಿ ಜಾರಿ ಮಾಡಲು ಮುಂದಾಗಿದೆ.  . ವರ್ಷದ ಡಿಗ್ರಿ ಕೋರ್ಸ್ ಮಾಡಿದ್ದಾರೆ. 2 ವರ್ಷದ ಡಿಗ್ರಿ, ನಾಲ್ಕು ವರ್ಷದ ಡಿಗ್ರಿ ಮಾಡಿದ್ದಾರೆ. ಇದನ್ನ ನಿವೃತ್ತ ಕ್ಯಾಬಿನೆಟ್ ಸೆಕರೇಟ್ರಿ ಯಾವುದೇ ಅಧ್ಯಯನ ಮಾಡದೆ 4 ವರ್ಷದ ಡಿಗ್ರಿ ಕೋರ್ಸ್ ಮಾಡಿದ್ದಾರೆ. ಇದರಿಂದ ಗ್ರಾಮೀಣ, ಹಿಂದುಳಿದ, ದುರ್ಬಲ ವರ್ಗದವರು ವಂಚಿತರಾಗುತ್ತಾರೆ. ಇದು ಒಂದು ವ್ಯವಸ್ಥಿತ ಯೋಜನೆ ಇಲ್ಲ. ಇವರ ಮೂಲ ಉದ್ದೇಶ ಅಮೇರಿಕಾಗೆ ಹೋಗಿ ಓದುವವರಿಗೆ ಅನುಕೂಲ ಮಾಡುವುದು. ಇದೊಂದು ಗೊಂದಲದ ತೀರ್ಮಾನವಾಗಿದೆ. ಪಾರ್ಲಿಮೆಂಟ್ ಲಿ ಇದು ಚರ್ಚೆ ಆಗಿಲ್ಲ ಎಂದು ಹೆಚ್.ಸಿ ಮಹದೇವಪ್ಪ ತಿಳಿಸಿದರು.

ಗುಣಮಟ್ಟದ ಶಿಕ್ಷಣ ಬೇಕು. ತಾಂತ್ರಿಕ ಶಿಕ್ಷಣ ಬೇಕು. ರಾಷ್ಟ್ರೀಯ ಶಿಕ್ಷಣ ನೀತಿಯನ್ನ ಯಾವುದೇ ಕಾರಣಕ್ಕೂ ಈ ನೀತಿ ಜಾರಿಗೆ ತರಬಾರದು. 4 ವರ್ಷ ಸಮಯ ಮತ್ತು ಹಣ ವ್ಯರ್ಥವಾಗಲಿದೆ. ಕೊಟಾರಿಯಾ ಕಮಿಷನ್ ಇದನ್ನು ರಿಜೆಕ್ಟ್ ಕೂಡ ಮಾಡಿದೆ. ಇದು ಶಿಕ್ಷಣ ವ್ಯವಸ್ಥೆಯನ್ನು ದುರ್ಭಲಗೊಳಿಸುವ ನಿರ್ಧಾರ ಎಂದು ಆರೋಪಿಸಿದರು.

ನವಿಲು ಯಾವುದು. ಕೆಂಬೂತ ಯಾವುದು ಅಂತ ಜನರಿಗೆ ಗೊತ್ತಿದೆ.

ದಶಪಥ ರಸ್ತೆ ರುವಾರಿ ಯಾರು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಸಂಸದ ಪ್ರತಾಪ್ ಸಿಂಹಗೆ ತಿರುಗೇಟು ನೀಡಿದ ಮಾಜಿ ಸಚಿವ ಎಚ್ ಸಿ ಮಹದೇವಪ್ಪ. ನವಿಲು ಯಾವುದು. ಕೆಂಬೂತ ಯಾವುದು ಅಂತ ಜನರಿಗೆ ಗೊತ್ತಿದೆ. ಈ ಯೋಜನೆ ಶುರು ಮಾಡಿದ್ದು ಯಾರು ಅಂತಾ ಜನರಿಗೆ ಗೊತ್ತಿದೆ. ನಾನೇ ಮಾಡಿದ್ದು ನಾನೇ ಮಾಡಿದ್ದು ಎಂದು ನಾನು ಎಂದು ಹೇಳಿಲ್ಲ. ರಸ್ತೆ ವಿಚಾರದಲ್ಲೆ ಯಡಿಯೂರಪ್ಪ ಅವರೇ ನನಗೆ ಹುಬ್ಬಳಿಯಲ್ಲೆ ಸನ್ಮಾನ ಮಾಡಿದ್ದಾರೆ. ಇದಕ್ಕಿಂತಾ ಇನ್ನೇನೂ ಬೇಕು ಎಂದು ಟಾಂಗ್ ನೀಡಿದರು.

ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ಹೆಸರು ಬದಲಾವಣೆಗೆ  ಸಂಸದ ಪ್ರತಾಪ್ ಸಿಂಹ  ಆಗ್ರಹ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹೆಚ್.ಸಿ ಮಹದೇವಪ್ಪ, ಸದ್ಯ ಭಾರತದ ಹೆಸರು ಬದಲಾಯಿಸಲು ಅವರು ಮುಂದಾಗುತ್ತಿಲ್ಲವಲ್ಲ. ಇದು ಅವರ ಮನಃಸ್ಥಿತಿ. ಹೆಸರು ಬದಲಾವಣೆ ಮಾಡೋದು ಬಿಟ್ಟು ಕಾಡಿನ ಸಂರಕ್ಷಣೆಗೆ ಒತ್ತು ನೀಡಲಿ. ಕೆರೆ ಕಟ್ಟೆಗೆ ನೀರು ತುಂಬಿಸುವ ಕೆಲಸ ಮಾಡಲಿ ಎಂದು ಕಿಡಿಕಾರಿದರು.

Key words: Former Minister- HC Mahadevappa – not issue -national education policy