ಬಿಜೆಪಿ ಸೇರ್ಪಡೆಯಾಗಲು ಮಾಜಿ ಸಚಿವ ಜಿಟಿಡಿ ಸಜ್ಜು

ಮೈಸೂರು, ಮಾರ್ಚ್ 01, 2020 (www.justkannada.in): ಬಿಜೆಪಿ ಸೇರ್ಪಡೆಯಾಗಲು ಮಾಜಿ ಸಚಿವ ಜಿಟಿಡಿ ಸಜ್ಜಾಗಿದ್ದಾರೆ.

ಹೌದು. ಬಿಜೆಪಿ ಸಂಘಟನಾ ಕಾರ್ಯದರ್ಶಿಯೊಂದಿಗೆ ಜಿಟಿಡಿ ರಹಸ್ಯ ಸಭೆ ನಡೆಸಿದ್ದಾರೆ ಎನ್ನಲಾಗಿದೆ.

ಜತೆಗೆ ಬೆಂಗಳೂರಿನಲ್ಲಿ ಸಂತೋಷ್ ಜೊತೆ ಜಿಟಿಡಿ ಗೌಪ್ಯ ಸಭೆ ನಡೆಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಜೆಡಿಎಸ್ ನಿಂದ ಅಂತರ ಕಾಯ್ದುಕೊಂಡಿರುವ ಜಿಟಿಡಿ. ಮೈತ್ರಿ ಸರ್ಕಾರದ ಪತನದ ನಂತರ ಬಹಿರಂಗವಾಗಿಯೇ ಜೆಡಿಎಸ್ ನಿಂದ ದೂರ ಉಳಿದಿದ್ದಾರೆ.

ಹಲವು ಬಿಜೆಪಿ ನಾಯಕರೊಂದಿಗೆ ಕಾರ್ಯಪ್ರವೃತ್ತರಾಗಿರುವ ಜಿಟಿಡಿ. ಇನ್ನೂ ಅಧಿಕೃತ ಬಿಜೆಪಿ ಸೇರ್ಪಡೆಯೊಂದೇ ಬಾಕಿ ಇದೆ. ಅತ್ತ ಜಿಟಿಯನ್ನೂ ಪಕ್ಷದಿಂದ ಉಚ್ಚಾಟಿಸಲು ಜೆಡಿಎಸ್ ಕೂಡಾ ಚಿಂತನೆ ನಡೆಸಿದೆ.