ನನ್ನಿಂದ ಯಾರಿಗಾದ್ರೂ ನೋವಾಗಿದ್ರೆ ಕ್ಷಮಿಸಿ- ಮಾಜಿ ಸಚಿವ ಡಿ.ಕೆ ಶಿವಕುಮಾರ್  ಹೇಳಿಕೆ…

ಬೆಂಗಳೂರು, ಅ.26,2019(www.justkannada.in):  ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ  50 ದಿನಗಳ ಬಂಧನದಲ್ಲಿದ್ದು   ಜಾಮೀನು ಪಡೆದು ಬಿಡುಗಡೆಯಾಗಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಇಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.

ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅದ್ಧೂರಿ ಸ್ವಾಗತಕ್ಕೆ  ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಅಣಿಯಾಗಿ ನಿಂತಿದ್ದಾರೆ. ಈ ಮಧ್ಯೆ ನವದೆಹಲಿಯಲ್ಲಿ ಮಾತನಾಡಿರುವ ಡಿ.ಕೆ ಶಿವಕುಮಾರ್ ನನ್ನಿಂದ ಯಾರ ಮನಸ್ಸಿಗಾದರೂ ತೊಂದರೆಯಾಗಿದ್ದರೇ ಕ್ಷಮಿಸಿ. ನನಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದು ತಿಳಿಸಿದರು.

ಹಾಗೆಯೇ ಅಕ್ಟೋಬರ್ 30 ರಂದು  ನನ್ನ ಪತ್ನಿ ಮತ್ತು ತಾಯಿ ವಿಚಾರಣೆ ಇದೆ. ಹೀಗಾಗಿ ಮತ್ತೆ ದೆಹಲಿಗೆ ವಾಪಸ್ ಬರಬೇಕು. ನಿನ್ನೆಯೇ ಬೆಂಗಳೂರಿಗೆ ಆಗಮಿಸಬೇಕಿತ್ತು. ಆದರೆ ಕೆಲ ವಕೀಲರನ್ನ ಭೇಟಿಯಾಗಿರಲಿಲ್ಲ. ಹೀಗಾಗಿ ಬರಲು ಆಗಲಿಲ್ಲ. ಮತ್ತೆ ವಿಚಾರಣೆಗೆ ಹಾಜರಾಗಬೇಕಿದೆ. ಅದ್ದರಿಂದ ವಕೀಲರನ್ನ ಭೇಟಿಯಾಗಿದ್ದೆ ಎಂದರು.

ಡಿಕೆ ಶಿವಕುಮಾರ್ ಸ್ವಾಗತಕ್ಕೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೆಂಬಲಿಗರು ಸಜ್ಜಾಗಿದ್ದು ಹೆಚ್ಚಿನ ಕಾರ್ಯಕರ್ತರು ಆಗಮಿಸುವ ಹಿನ್ನೆಲೆ, ಸದಾಶಿವನಗರದಲ್ಲಿರುವ ಡಿ.ಕೆ ಶಿವಕುಮಾರ್ ನಿವಾಸಕ್ಕೆ ಪೊಲೀಸ್ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಸುಮಾರು 200ಕ್ಕೂ ಹೆಚ್ಚು ಪೊಲೀಸರನ್ನ ನಿಯೋಜನೆ ಮಾಡಲಾಗಿದೆ.

Key words: former minister- DK shivakumar-new dehli- Bangalore-welcome