‘ಹನುಮ ಹುಟ್ಟಿದ್ದು ಗೊತ್ತಾ’ ಎಂಬ ಸಿದ್ಧರಾಮಯ್ಯ ಹೇಳಿಕೆಗೆ ಮಾಜಿ ಸಚಿವ ಸಿ.ಟಿ ರವಿ ತಿರುಗೇಟು ನೀಡಿದ್ದು ಹೀಗೆ…

ಚಿಕ್ಕಮಗಳೂರು,ಡಿಸೆಂಬರ್,28,2020(www.justkannada.in):  ನಿನ್ನೆ ಹನುಮ ಜಯಂತಿ ದಿನ ಚಿಕನ್ ತಿನ್ನುವ ವೇಳೆ  ಬೆಂಬಲಿಗನೋರ್ವ ಕೇಳಿದ ಪ್ರಶ್ನೆಗೆ ಹನುಮ ಹುಟ್ಟಿದ್ದು ಗೊತ್ತಾ..? ಎಂದಿದ್ಧ ಮಾಜಿ ಸಿಎಂ ಸಿದ್ದರಾಮಯ್ಯಗೆ  ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಟಾಂಗ್ ನೀಡಿದ್ದಾರೆ.

ತಾಯಿ ‘ಇವರೇ ನಿಮ್ಮ ತಂದೆ’ ಎಂದರೆ ನಂಬುತ್ತಾರೆ ಸಾಕ್ಷಿ ಕೇಳುವುದಿಲ್ಲ. ಆದರೆ ಕೆಲವರು ಸಾಕ್ಷಿ ಕೇಳುವ ಮನಸ್ಥಿತಿಯ ಜನೂ ಇರುತ್ತಾರೆ. ಸಿದ್ದರಾಮಯ್ಯ ಸಾಕ್ಷಿ ಕೇಳುವ ಮನಸ್ಥಿತಿ ಇದ್ದರೆ ಅವರ ದೋಷ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯಗೆ  ಮಾಜಿ ಸಚಿವ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಸಿದ್ಧರಾಮಯ್ಯ ಹೇಳಿಕೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿ.ಟಿ ರವಿ, ನಂಬಿಕೆ ಎಲ್ಲವನ್ನೂ ಮೀರಿದ್ದು. ಜಗತ್ತು ನಂಬಿಕೆಗಳ ಮೇಲೆ ಇರುವುದು. ಕೆಲವರಿಗೆ ಭಗವಂತ ಕಾಣಲ್ಲ, ಕೆಲವರಿಗೆ ಎಲ್ಲ ಕಡೆ ಕಾಣುತ್ತಾನೆ. ನೋಡುವ ದೃಷ್ಟಿ ಇರುವವರಿಗೆ ಭಗವಂತನನ್ನು ತೋರಿಸಬಹುದು. ಆದರೆ ನೋಡುವ ದೃಷ್ಟಿ ಇಲ್ಲದವರಿಗೆ ಎಲ್ಲಿ ನಿಂತರೂ ಭಗವಂತವ ಕಾಣುವುದಿಲ್ಲ. ಕೆಲವರಿಗೆ ಎಲ್ಲವನ್ನೂ ಅನುಮಾನಿಸುವ ಪ್ರವೃತ್ತಿ ಇರುತ್ತದೆ. ಸಿದ್ದರಾಮಯ್ಯ ಅವರಿಗೂ ಅಂತಹ ಕಾಯಿಲೆ ಇದ್ದರೆ ಅದು ಅವರ ದೋಷ ಎಂದು ಕಿಡಿಕಾರಿದರು.former-minister-ct-ravi-siddaramaiah-statement-hanuma-born

ಸಿದ್ದರಾಮಯ್ಯನವರ ನಂಬಿಕೆ ಹುಟ್ಟಿನಿಂದ ಬಂದಿರುವುದಲ್ಲ ಸಹವಾಸ ದೋಷದಿಂದ ಬಂದಿರುವುದು. ಅವರ ತಂದೆ-ತಾಯಿಗೆ ದೇವರ ಮೇಲೆ ಶ್ರದ್ಧೆ ಇರುವು ಕಾರಣಕ್ಕೆ ಅವರಿಗೆ ದೇವರ  ಹೆಸರು ಇಟ್ಟರು. ಆದರೆ ಸಹವಾಸ ದೋಷದಿಂದ ಅವರು ಕೆಟ್ಟಿದ್ದಾರೆ  ಎಂದು ಸಿದ್ಧರಾಮಯ್ಯಗೆ  ಸಿ.ಟಿ ರವಿ ಟಾಂಗ್ ನೀಡಿದರು.

English summary…..

Former Minister C.T. Ravi responds to Siddu’s comments on Hanuma Jayanthi
Chikkamagaluru, Dec. 28, 2020 (www.justkannada.in): While Former Chief Minister Siddaramaiah was having non-vegetarian food on Sunday, one of his followers reminded him that it was ‘Hanuman Jayanthi,’ and he was not supposed to have non-veg, following which Siddaramaiah questioned him whether he knows exactly when Hanuman was born. In his response to Siddu’s comments, BJP leader and former Minister C.T. Ravi sarcastically said, “people won’t ask for evidence if we say ‘he is your father’, but a few people are there who asks for evidence. If Siddaramaiah seeks evidence it is his fault.”former-minister-ct-ravi-siddaramaiah-statement-hanuma-born
“Belief is above all. The entire world is existing on belief. God won’t be visible for a few people, but he is visible everywhere for others. If you have the intention to see you can find god. But he won’t be visible to those who won’t believe. A few people suspect every small thing. Siddaramaiah also probably belongs to that category,” he said.
Keywords: Hanuman Jayanthi/ Siddaramaiah/ C.T. Ravi/

Key words:  Former Minister -CT Ravi  – Siddaramaiah’ statement -Hanuma -born .