ಪಟಾಕಿ ರವಿ ಎಂದು ವ್ಯಂಗ್ಯವಾಡಿದ ಡಿ.ಕೆ ಶಿವಕುಮಾರ್ ಗೆ ತಿರುಗೇಟು ನೀಡಿದ ಮಾಜಿ ಸಚಿವ ಸಿ.ಟಿ ರವಿ.

ಚಿಕ್ಕಮಗಳೂರು,ಡಿಸೆಂಬರ್,21,2021(www.justkannada.in): ತಮ್ಮನ್ನು ಪಟಾಕಿ ರವಿ ಎಂದು ಲೇವಡಿ ಮಾಡಿದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ತಿರುಗೇಟು ನೀಡಿದ್ದಾರೆ.

ಈ ಹೇಳಿಕೆ ಕುರಿತು ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯಿಸಿದ ಮಾಜಿ ಸಚಿವ ಸಿ.ಟಿ ರವಿ, ಪಟಾಕಿಯನ್ನ ಶುಭಕಾರ್ಯಕ್ಕೆ ಹಚ್ಚಿ ಸ್ವಾಗತಿಸುತ್ತಾರೆ.  ಬೆಂಕಿ ಹಚ್ಚುವ ಜಾಯಮಾನಕ್ಕೆ ನಾನು ಸೇರಿದವನಲ್ಲ.  ಊರಿಗೆ ಬೆಂಕಿ ಹಚ್ಚಿ ಇದ್ದಿಲು ಮಾರಿದ್ರೆ ಎಷ್ಟು ಲಾಭವಾಗುತ್ತೆ. ಈ ರೀತಿ ಲೆಕ್ಕ ಹಾಕುವ ಮನಸ್ಥಿತಿ ಉಳ್ಳುವರು ಕಾಂಗ್ರೆಸ್ ನವರು.  ಹೀಗಾಗಿ ಕನ್ನಡಿಗರು ಮತ್ತು ಮರಾಠಿಗರ ನಡುವೆ ಸಂಘರ್ಷವನ್ನುಂಟು ಮಾಡುತ್ತಿದ್ದಾರೆ.

ತುಕಡೆ ಗ್ಯಾಂಗ್ ನವರು ಕಾಂಗ್ರೆಸ್ ನಲ್ಲಿ ಸೇರಿಕೊಂಡಿದ್ದಾರೆ ಎಂದು ಸಿಟಿ ರವಿ ಲೇವಡಿ ಮಾಡಿದರು.

Key words: Former Minister -CT Ravi- kpcc-president-DK Sivakumar