ಹೆಚ್.ಡಿ ರೇವಣ್ಣ ಅವರ ನಿಂಬೆಹಣ್ಣು, ಬರಿ ಕಾಲು ಪೂಜೆ  ಫಲಿಸಲಿಲ್ಲ-ಚಾಮುಂಡಿ ಬೆಟ್ಟದಲ್ಲಿ ಮಾಜಿ ಸಚಿವ ಎ. ಮಂಜು ವ್ಯಂಗ್ಯ….

ಮೈಸೂರು,ಜು,24,2019(www.justkannada.in): ರೇವಣ್ಣ ಅವರ ನಿಂಬೆಹಣ್ಣು, ಬರಿ ಕಾಲು ಪೂಜೆ  ಫಲಿಸಲಿಲ್ಲ. ಬರಿಕಾಲಿನಲ್ಲಿ ನಡೆದ್ರೆ ನಿಂಬೆಹಣ್ಣು ಹಿಡ್ಕೊಂಡ್ ಹೋದ್ರೆ ನಮ್ಮ ಫ್ಯಾಮಿಲಿಗೆ ಒಳ್ಳೇದಾಗತ್ತೆ ಅಂದುಕೊಂಡ್ರು, ಅದು ಸಾಧ್ಯವಾಗಲಿಲ್ಲ  ಎಂದು ಮಾಜಿ ಸಚಿವ ಎ. ಮಂಜು ವ್ಯಂಗ್ಯವಾಡಿದರು.

ಇಂದು ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ಮಾತನಾಡಿದ ಬಿಜೆಪಿ ಮುಖಂಡ ಎ. ಮಂಜು, ದೇವೇಗೌಡರ ಕುಟುಂಬಕ್ಕೆ 9ರ ಕಂಟಕ  ಇದೆ ಎಂದು ಮುಂಚಿತವಾಗಿಯೇ ಹೇಳಿದ್ದೆ.  1999, 2009, 2019 ಅವರಿಗೆ ಆಗೋದಿಲ್ಲ ಎಂದಿದ್ದೆ. ಎಲ್ಲರಿಗೂ  ದೇವರು ಇರುತ್ತದೆ,  ಮಂಗಳವಾರ ಮುಂದೂಡಿದ್ರೆ  ಒಳ್ಳೇದಾಗತ್ತೆ ಅಂತ  ರೇವಣ್ಣ ಸದನ ಮುಂದೂಡಲು ಮುಂದಾಗಿದ್ರು. ಆದರೆ ಅವರ ನಿಂಬೆ ಹಣ್ಣಿಗೆ  ತಕ್ಕ ಉತ್ತರ ದೊರೆತಿದೆ ಎಂದು ಲೇವಡಿ ಮಾಡಿದರು.

ರೈತರು ಸಂಕಷ್ಟದಲ್ಲಿದ್ದಾರೆ.  ರಾಜ್ಯಕ್ಕೆ, ಯಡಿಯೂರಪ್ಪ ಹಾಗೂ ಮೋದಿ ಅವರಿಗೆ ಒಳ್ಳೆದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ. ಕಳೆದ 10ದಿನಗಳಲ್ಲಿ ನಡೆಯುತ್ತಿದ್ದ ರಾಜಕೀಯ ಬೆಳವಣಿಗೆಗೆ ತೆರೆ ಬಿದ್ದಿದೆ. ಮೈತ್ರಿ  ಸರ್ಕಾರವನ್ನ ಯಾರು ಬೀಳಿಸಿಲ್ಲ, ಅವರೇ ಬೀಳಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯ ಸುಭಿಕ್ಷವಾಗಿ ಸಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದು ಎ. ಮಂಜು ತಿಳಿಸಿದರು.

ಈಗಾಗಲೇ ನ್ಯಾಯಾಲಯದ ಮೊರೆ ಹೋಗಿದ್ದೇನೆ ಮೂರ್ನಾಲ್ಕು ತಿಂಗಳಲ್ಲಿ ನನಗೆ ಜಯ ಸಿಗಲಿದೆ. ನಮ್ಮ ಸರ್ಕಾರ ಯಶಸ್ವಿಯಾಗಿ  ನಡೆಯಲಿದೆ ಎನ್ನುವ ವಿಶ್ವಾಸವಿದೆ. ಸದ್ಯ ನಾನು ಸಂಪುಟ ಸೇರಿಕೊಳ್ಳುವ ಪ್ರಯತ್ನ ನಡೆಸಿಲ್ಲ ಎಂದು ಹೇಳಿದರು.

Key words: Former minister -A. Manju -Visit t-Chamundi hills- Special Worship