ಮೈಸೂರು ಪಾಲಿಕೆ ಬಜೆಟ್ ಪೂರ್ವಭಾವಿ ಸಭೆ: ಸ್ವಚ್ಚತೆ ಸೇರಿ ಹಲವು ಸಲಹೆಗಳನ್ನ ನೀಡಿದ ಮಾಜಿ ಮೇಯರ್ ಶಿವಕುಮಾರ್

ಮೈಸೂರು,ಜನವರಿ,7,2026 (www.justkannada,in):  ಈ ಹಿಂದೆ ಸ್ವಚ್ಛ ಸರ್ವೇಕ್ಷಣಾ ಅಭಿಯಾನದಲ್ಲಿ ಮೊದಲ ಸ್ಥಾನ ಪಡೆದಿದ್ದ ಮೈಸೂರು ನಗರ ಇದೀಗ ಸ್ವಚ್ಛತೆಯಲ್ಲಿ ಹಿಂದೆ ಬಿದ್ದಿದೆ.  ಹೀಗಾಗಿ ನಾವೂ ಕೂಡ ಇಂದೋರ್ ಮಾದರಿಯನ್ನಅನುಸರಿಸಿ ಮೈಸೂರು ನಗರವನ್ನ ಮತ್ತೆ ಸ್ವಚ್ಛನಗರಿಯನ್ನಾಗಿ ಮಾಡಲು ಪ್ರಯತ್ನಿಸಬೇಕು ಎಂದು ಮೈಸೂರು ಮಹಾನಗರ ಪಾಲಿಕೆ ಮಾಜಿ ಮೇಯರ್ ಶಿವಕುಮಾರ್ ತಿಳಿಸಿದರು.

ಇಂದು ಮೈಸೂರು ಮಹಾನಗರ ಪಾಲಿಕೆಯ ಪೂರ್ವಭಾವಿ ಸಭೆ ನಡೆಸಲಾಯಿತು. ಸಭೆಯಲ್ಲಿ ಮಾಜಿ ಮೇಯರ್ ಗಳಿಂದ ಹಲವು ಸಲಹೆ ಸೂಚನೆಗಳನ್ನ ಪಡೆಯಲಾಯಿತು.

ಸಭೆಯಲ್ಲಿ ಮಾತನಾಡಿ ಹಲವು ಸಲಹೆಗಳನ್ನ ನೀಡಿದ ಮಾಜಿ ಮೇಯರ್ ಶಿವಕುಮಾರ್, ಮೈಸೂರಿಗೆ ಇತಿಹಾಸವಿದೆ. ಆದರೆ ಮೈಸೂರು ನಗರಸ್ವಚ್ಛತೆಯಲ್ಲಿ ಹಿಂದೆ ಇದ್ದೇವೆ.  ದೇಶದಲ್ಲೇ  ಸ್ವಚ್ಚತೆಯಲ್ಲಿ ಇಂದೋರ್ ಪ್ರಥಮ ಸ್ಥಾನ ಪಡೆಯುತ್ತಿದೆ. ಹೀಗಾಗಿ ಇಂದೋರ್ ಮಾದರಿಯಲ್ಲಿ ನಾವು ಕೂಡ ಸ್ವಚ್ಛತಾ ಕಾರ್ಯಮಾಡಬೇಕಿದೆ. ಇಂದೋರ್ ನಲ್ಲಿರುವ  ಕಂಟ್ರೋಲ್ ಅಂಡ್ ಕಮಾಂಡಿಂಗ್ ಸೆಂಟರ್ ವ್ಯವಸ್ಥೆಯನ್ನು ಮೈಸೂರಿಗೂ ತರಬೇಕು. ಈ ಮೂಲಕ ಮನೆ ಮನೆ ಬಾಗಿಲಿಗೆ ತೆರಳಿ ಕಸ ಸಂಗ್ರಹ ಪೌರಕಾರ್ಮಿಕರ ಆನ್ ಲೈನ್ ಹಾಜರಾತಿ, ಕಸ ಸಂಗ್ರಹ ವಾಹನಗಳ  ನಿರ್ವಹಣೆ ಮಾಡುವುದು. ಎಲ್ಲೆಂದರಲ್ಲಿ ಕಸೆ ಎಸೆಯುವುದಕ್ಕೆ ಕಡಿವಾಣ ಅಂತವರಿಗೆ ದಂಡ ವಿಧಿಸಿವುದು ಈ ರೀತಿಯ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬಹುದಾಗಿದೆ. ಈ ವ್ಯವಸ್ಥೆ ತೆಲಂಗಾಣ, ದೆಹಲಿ ಇಂದೋರ್ ನಲ್ಲಿದ್ದು ಮೈಸೂರಿಗೂ ತಂದು ಸ್ವಚ್ಛನಗರಿ ಪಟ್ಟ ಮತ್ತೆ ಮರುಕಳಿಸುವಂತೆ ಮಾಡಬೇಕಿದೆ ಎಂದು ತಿಳಿಸಿದರು.

ಹಾಗೆಯೇ ಮೈಸೂರು ನಗರದಲ್ಲಿ ಪ್ರಾಜೆಕ್ಟ್ ಮ್ಯಾನೇಜ್ ಮೆಂಟ್ ಸಿಸ್ಟಮ್ ಅನ್ನು ಅಳವಡಿಸಿಕೊಳ್ಳಬೇಕಿದೆ.  ಈ ವ್ಯವಸ್ಥೆಯಿಂದಾಗಿ  ಎಲ್ಲಾ ಕಾಮಗಾರಿಗಳನ್ನ ಮಾನಿಟರ್ ಮಾಡಬಹುದಾಗಿದೆ. ನಿಗದಿತ ವೇಳೆಗೆ ಕಾಮಗಾರಿ ಪೂರ್ಣ, ಗುಣಮಟ್ಟ ಎಲ್ಲವನ್ನೂ ಈ ವ್ಯವಸ್ಥೆಯಿಂದ ಕಾಯ್ದುಕೊಳ್ಳಬಹುದಾಗಿದೆ  ಎಂದು ಶಿವಕುಮಾರ್ ಸಲಹೆ ನೀಡಿದರು.

ಹಾಗೆಯೇ ರೋಡ್  ಹಿಸ್ಟರಿ ಅಂದರೆ ಸಂಪೂರ್ಣವಾಗಿ ಎಲ್ಲಾ ರಸ್ತೆಗಳನನ್ನು ಸರ್ವೆ ಮಾಡಬೇಕು.  ಭೂಮಿ ಮೇಲಿನ ರಸ್ತೆ ಭೂಮಿ ಒಳಗಿರುವುದು ಎಲ್ಲವನ್ನೂ ಸರ್ವೇ ಮಾಡಬೇಕು. ಹಾಗೆಯೇ ಪಾರಂಪರಿಕ ಕಟ್ಟಡಗಳು ಶೀಥಿಲವಾಗಿದೆ . ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ಮೈಸೂರು ಮಹಾನಗರ ಪಾಲಿಕೆಯು ಪ್ರತಿವರ್ಷ ಒಂದೊಂದು ಪಾರಂಪರಿಕ ಕಟ್ಟಡವನ್ನುಸಂರಕ್ಷಣೆ ಮಾಡಬೇಕು ಎಂದು ಮಾಜಿ ಮೇಯರ್ ಶಿವಕುಮಾರ್ ಸಲಹೆ ನೀಡಿದರು.

Key words: Mysore city Corporation, pre-budget, meeting, Former Mayor, Shivakumar