ಕಾಡು ಮನುಷ್ಯ ಎಂಬ ಸಿದ್ಧರಾಮಯ್ಯ ಹೇಳಿಕೆಗೆ ನಳೀನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದು ಹೀಗೆ….

ಬೆಂಗಳೂರು,ಅಕ್ಟೋಬರ್,22,2020(www.justkannada.in):  ತಮ್ಮನ್ನ ಕಾಡು ಮನುಷ್ಯ ಎಂದು ಕರೆದಿರುವ ಮಾಜಿ ಸಿಎಂ ಸಿದ್ಧರಾಮಯ್ಯ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಟ್ವೀಟ್ ಮಾಡಿ ತಿರುಗೇಟು ನೀಡಿದ್ದಾರೆ.jk-logo-justkannada-logo

ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಿದ್ಧರಾಮಯ್ಯನವರ ಖಾತೆ ಹ್ಯಾಕ್ ಆಗಿದೆ ಎಂದು ಭಾವಿಸುತ್ತೇನೆ. ಇದು ನಿಜವೇ ಆಗಿದ್ದರೇ ಪೊಲೀಸರಿಗೆ ದೂರು ಕೊಡಿ. ಯಾಕೆಂದರೇ ಇದು ನಿಮ್ಮಂಥ ನಾಯಕರಿಗೆ ಶೋಭಿಸುವ ಭಾಷೆಯಂತೂ ಅಲ್ಲ. ನಿಮ್ಮ ಖಾತೆ ಹ್ಯಾಕ್ ಆಗದೇ ಇದ್ದಲ್ಲಿ ನಿಮ್ಮ ಅಸಹನೆ ಮತ್ತು ಅದನ್ನ ವ್ಯಕ್ತಪಡಿಸಿದ ರೀತಿಯ ಬಗ್ಗೆ ಸಹಾನೂಭೂತಿ ಇದೆ ಎಂದು ಟಾಂಗ್ ನೀಡಿದ್ದಾರೆ.former-cm-siddaramaiahs-statement-wild-man-bjp-state-president-nalin-kumar-kateel

ಕಾಡಿಗೆ ಹುಲಿ ಓಡಿಸುತ್ತೇನೆ, ಬಂಡೆ ಒಡೆಯುತ್ತೇನೆ ಎಂದು ಹೇಳಿಕೊಂಡು ತಿರುಗಾಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಒಬ್ಬ ಕಾಡು ಮನುಷ್ಯ, ನಾಗರಿಕ ಜಗತ್ತಲ್ಲಿ ಇರಲು ನಾಲಾಯಕ್ ಆಗಿರುವ ಈ ವ್ಯಕ್ತಿಯನ್ನು ನಾಡಿನ ಜನರ ಹಿತದೃಷ್ಟಿಯಿಂದ ಬಿಜೆಪಿ ತಕ್ಷಣ ಕಾಡಿಗೆ ಕೊಂಡು ಹೋಗಿ ಬಿಡಬೇಕು ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ವ್ಯಂಗ್ಯವಾಡಿದ್ದರು.

Key words: former cm- Siddaramaiah’s -statement – wild man –bjp-state-president- ‘Nalin Kumar Kateel’…