ಸಿಎಲ್ ಪಿ ಸಭೆ ಬಳಿಕ ಸುದ್ದಿಗೋಷ್ಠಿ: ಅತೃಪ್ತ ಶಾಸಕರಿಗೆ  ಕೊನೆಯೇ ಅವಕಾಶ ನೀಡಿ ಎಚ್ಚರಿಕೆ ಕೊಟ್ಟ ಮಾಜಿ ಸಿಎಂ ಸಿದ್ದರಾಮಯ್ಯ…

ಬೆಂಗಳೂರು,ಜು,9,2019(www.justkannada.in): ರಾಜೀನಾಮೆ ನೀಡಿದವರು ವಾಪಸ್ ಬಂದು ರಾಜೀನಾಮೆ ವಾಪಸ್ ಪಡೆಯಲಿ. ಇಲ್ಲವಾದ್ರೆ ಕಾನೂನು ಕ್ರಮ ಎದುರಿಸಲಿ. ಇದು ಲಾಸ್ಟ್ ಚಾನ್ಸ್ ಎಂದು ಸಿಎಲ್ ಪಿ ನಾಯಕ ಸಿದ್ದರಾಮಯ್ಯ ಅತೃಪ್ತ ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ.

ಇಂದು ವಿಧಾನಸೌಧದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಿಎಲ್ ಪಿ ಸಭೆ ನಡೆಯಿತು. ಸಭೆ ಬಳಿಕ ಕಾಂಗ್ರೆಸ್ ನಾಯಕರು ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಲ್ ಪಿ ನಾಯಕ ಸಿದ್ದರಾಮಯ್ಯ ರಾಜೀನಾಮೆ ನೀಡಿದ ಶಾಸಕರನ್ನ ಅನರ್ಹಗೊಳಿಸಲು ಸ್ಪೀಕರ್ ಗೆ ದೂರು ನೀಡುತ್ತೇವೆ. ಸ್ಪೀಕರ್ ಅವರೇ  ಸುಪ್ರೀಂ. ಶಾಸಕರು ಅನರ್ಹರಾದ್ರೆ ಅವರು 6 ವರ್ಷ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಹೀಗಾಗಿ ರಾಜೀನಾಮೆ ನೀಡಿದವರು ವಾಪಸ್ ಬಂದು ರಾಜೀನಾಮೆ ವಾಪಸ್ ಪಡೆಯಲಿ ಇಲ್ಲವಾದರೇ ಕಾನೂನು ಕ್ರಮ ಎದುರಿಸಿ ಎಂದು ಎಚ್ಚರಿಕೆ ನೀಡಿದ್ದಾರೆ.

ಇನ್ನು ಸಿಎಲ್ ಪಿ ಸಭೆಗೆ ರಾಜೀನಾಮೆ ನೀಡಿರುವ 10 ಶಾಸಕರು ಸಭೆಗೆ ಬರಲಿಲ್ಲ.  ಗೈರಾಗಿದ್ದವರು ಕಾರಣ ನೀಡಿ ಪತ್ರ ಬರೆದಿದ್ದಾರೆ. ಜುಲೈ 12 ರಿಂದ ವಿಧಾನಸಭೆ ಅಧಿವೇಶನ ಆರಂಭವಾಗಲಿದೆ. ಅಧಿವೇಶನದಲ್ಲಿ ಏನು ಮಾಡಬೇಕೆಂಬ ವಿಚಾರದ ಬಗ್ಗೆ ಸಭೆಯಲ್ಲಿ ಚರ್ಚಿಸಿದ್ದೇವೆ. ಎಲ್ಲಾ ಇಲಾಖೆಗಳ ಬೇಡಿಕೆ ಬಗ್ಗೆ ಚರ್ಚೆ ಮಾಡಿದ್ದೇವೆ.  ಅಧಿವೇಶನಕ್ಕೆ ಹಾಜರಾಗುವಂತೆ ಎಲ್ಲರಿಗೂ ತಿಳಿಸಿದ್ದೇವೆ.  ಪಕ್ಷದ ಹಿತದೃಷ್ಠಿಯಿಂದ ಎಲ್ಲಾ ಶಾಸಕರ ಅಭಿಪ್ರಾಯ ಪಡೆದಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಪ್ರಸಕ್ತ ರಾಜಕೀಯದ ಬಗ್ಗೆಯೂ ಚರ್ಚಿಸಿದ್ದೇವೆ. ಸಚಿವರು ಸ್ವಪ್ರೇರಣೆಯಿಂದ ರಾಜೀನಾಮೆ ನೀಡಿದ್ದಾರೆ. ಪಕ್ಷದ ಒಗ್ಗಟ್ಟನ್ನ ಕಾಪಾಡಲು ರಾಜೀನಾಮೆ ನೀಡಿದ್ದಾರೆ. ಅತೃಪ್ತ ಶಾಸಕರ ರಾಜೀನಾಮೆ ಬಗ್ಗೆ ಸ್ಪೀಕರ್ ತೀರ್ಮಾನ ಕೈಗೊಳ್ಳುತ್ತಾರೆ ಎಂದು ನುಡಿದರು.

ಇದೇ ವೇಳೆ ಬಿಜೆಪಿ ವಿರುದ್ದ ಕಿಡಿಕಾರಿದ ಸಿದ್ದರಾಮಯ್ಯ, ಬಿಜೆಪಿಯಿಂದ ಪ್ರಜಾಪ್ರಭುತ್ವ ವಿರೋಧಿ ಕೆಲಸ. ಬಿಜೆಪಿ  ಚುನಾಯಿತ ಸರ್ಕಾರವನ್ನ ಅಸ್ಥಿರಗೊಳಿಸುವ ಕೆಲಸ ಮಾಡುತ್ತಿದೆ.  ಜೆಡಿಎಸ್ ಕಾಂಗ್ರೆಸ್ ಸೇರಿದ್ರೆ ಶೇ.57ಕ್ಕಿಂತಲೂ ಹೆಚ್ಚಾಗುತ್ತೆ. ಶೇಕಡವಾರು ಮತಗಳು ನಮಗೆ ಹೆಚ್ಚು ಬಂದಿವೆ. ಆದ್ರೆ ನಾವೇ ಬಹುಮತ ಪಡೆದಿದ್ದೇವೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಅಂದು ವಿಧಾನಸಭೆಯಲ್ಲಿ ಬಿಎಸ್ ವೈ ವಿಶ್ವಾಸ ಮತಯಾಚಿಸಲು ವಿಫಲರಾದ ಬಳಿಕ ನಾವು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರಚಿಸಿದ್ದವು. ಒಂದು ವರ್ಷದಿಂದ ಸಮ್ಮಿಶ್ರ ಸರ್ಕಾರ ನಡೆಯುತ್ತಿದೆ. ಅಂದಿನಿಂದಲೂ ಸರ್ಕಾರ ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ. ಸರ್ಕಾರ ಅಸ್ಥಿರಗೊಳಿಸಲು 6 ಬಾರಿ ಯತ್ನಿಸಿದ್ದಾರೆ. ಇದರಲ್ಲಿ ಅಮಿತ್ ಶಾ ಅವರ ಕೈವಾಡವೂ ಇದೆ. ಇದು ಪ್ರಜಾಪ್ರಭುತ್ವದ ವಿರೋಧಿ ಕೆಲಸ. ಹಣ ಸಚಿವ ಸ್ಥಾನಮಾನದ ಅಮಿಷ ಒಡ್ಡಿದ್ದಾರೆ. ಅಷ್ಟೊಂದು ಹಣ ಎಲ್ಲಿಂದ ಬರುತ್ತದೆ. ಇದನ್ನ ಹಲವು ಬಾರಿ ನಾನು ಪ್ರಶ್ನಿಸಿದ್ದೇನೆ ಎಂದು ವಾಗ್ದಾಳಿ ನಡೆಸಿದರು.

Key words: former CM- Siddaramaiah- warned -dissatisfied MLAs