ರಮೇಶ್ ಕುಮಾರ್ ರನ್ನ ಜೈಲಿಗೆ ಕಳಿಸುತ್ತೇನೆ ಎಂದಿದ್ಧ ಸಚಿವ ಸುಧಾಕರ್ ಗೆ ಮಾಜಿ ಸಿಎಂ ಸಿದ್ಧರಾಮಯ್ಯ ತಿರುಗೇಟು.

0
1

ವಿಜಯಪುರ,ಅಕ್ಟೋಬರ್,21,2021(www.justkannada.in):  ಶಾಸಕ ರಮೇಶ್ ಕುಮಾರ್ ರನ್ನ ಜೈಲಿಗೆ ಕಳುಹಿಸುತ್ತೇನೆ ಎಂದು ಹೇಳಿಕೆ ನೀಡಿದ್ಧ ಸಚಿವ ಡಾ.ಕೆ.ಸುಧಾಕರ್ ಗೆ ಮಾಜಿ ಸಿಎಂ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ಧರಾಮಯ್ಯ, ಸುಧಾಕರ್ ಗೆ ಅಧಿಕಾರದ ಮದ ಇದೆ. ಸುಧಾಕರ್ ದುರಂಹಕಾರದಲ್ಲಿ ಮಾತನಾಡುತ್ತಿದ್ದಾರೆ  ಅಧಿಕಾರ ಶಾಶ್ವತ ಅಂದು ಕೊಂಡಿದ್ದಾರೆ. 2023ಕ್ಕೆ ಅವರೆಲ್ಲಾ ಮನೆಗೆ ಹೋಗುತ್ತಾರೆ.  ಆಗ ಯಾರು ಜೈಲಿಗೆ ಹೋಗುತ್ತಾರೆ ಅಂತಾ ಗೊತ್ತಾಗುತ್ತದೆ ಎಂದು ಟಾಂಗ್ ನೀಡಿದರು.

ಹಾಗೆಯೇ ರಾಹುಲ್ ಗಾಂಧಿ  ಬಗ್ಗೆ ಹೇಳಿಕೆ ನೀಡಿದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ಧರಾಮಯ್ಯ, ಕಟೀಲ್ ಓರ್ವ ಜೋಕರ್. ಅವರಿಗೆ ತಲೆಕೆಟ್ಟಿದೆ ಹತಾಶರಾದಾಗ ಮಾತ್ರ ಅವಾಚ್ಯ ಶಬ್ದಗಳನ್ನ ಬಳಸುತ್ತಾರೆ ಎಂದು ಕಿಡಿಕಾರಿದರು.

ಹಾಗೆಯೇ ಜೆಡಿಎಸ್ ವಿರುದ್ಧವೂ ಗುಡುಗಿದ ಸಿದ್ಧರಾಮಯ್ಯ, ಜೆಡಿಎಸ್ ಪ್ರಾದೇಶಿಕ ಪಕ್ಷ ಮಾತ್ರ. ಅದು ಜಾತ್ಯಾತೀತ ಪಕ್ಷವಲ್ಲ. ಅದು ಕೋಮುವಾದಿ ಪಕ್ಷ ಎಂದು ಹರಿಹಾಯ್ದರು.

Key words: Former CM Siddaramaiah –outrage-minister-sudhakar- Ramesh Kumar -jail