ಹೆಚ್ಚು ಸಾಲ ಮಾಡಿದ ಸಿದ್ಧರಾಮಯ್ಯಗೆ ಭಾರತ ರತ್ನ ನೀಡಲಿ-ಶಾಸಕ .ಸಾರಾ ಮಹೇಶ್ ವ್ಯಂಗ್ಯ.

ಮೈಸೂರು,ಮಾರ್ಚ್,14,2022(www.justkannada.in):  ರಾಜ್ಯದಲ್ಲಿ ಸಿಎಂ ಆಗಿದ್ದಾಗ ಸಿದ್ಧರಾಮಯ್ಯ ಹೆಚ್ಚು ಸಾಲ ಮಾಡಿದ್ದಾರೆ. ಹೆಚ್ಚು ಸಾಲ ಮಾಡಿರುವ ಸಿದ್ಧರಾಮಯ್ಯಗೆ ಭಾರತರತ್ನ ನೀಡಲಿ ಎಂದು ಶಾಸಕ ಸಾ.ರಾ ಮಹೇಶ್ ವ್ಯಂಗ್ಯವಾಡಿದರು.

ಮೈಸೂರು ಜಿಲ್ಲೆ ಕೆ.ಆರ್ ನಗರದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಸಾ.ರಾ ಮಹೇಶ್,  ರಾಜ್ಯದಲ್ಲಿ ಹಲವರು ಸಿಎಂ ಆಗಿ ಹೋಗಿದ್ದಾರೆ. ಆದರೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ  ಹೆಚ್ಚು ಸಾಲ ಮಾಡಿದ್ದಾರೆ.  ಯಾರ ಮಾಡದಷ್ಟು ಸಾಲ ಸಿದ್ಧರಾಮಯ್ಯ ಮಾಡಿದ್ದಾರೆ.  ರಾಜ್ಯದ ಬಜೆಟ್ ನಷ್ಟೆ  ಸಾಲ ಮಾಡಿದ್ದಾರೆ.  ಹೆಚ್ಚು ಸಾಲ ಮಾಡಿದ ಸಿದ್ದರಾಮಮಯ್ಯಗೆ ಭಾರತ ರತ್ನ ನೀಡಲಿ ಎಂದು ಲೇವಡಿ ಮಾಡಿದರು.

Key words: former CM- Siddaramaiah –MLA-Sara Mahesh