ಮಧ್ಯಾಹ್ನ ದೆಹಲಿಗೆ ಮಾಜಿ ಸಿಎಂ ಸಿದ್ಧರಾಮಯ್ಯ..

ಬೆಂಗಳೂರು,ಮೇ,15,2023(www.justkannada.in):  ರಾಜ್ಯದಲ್ಲಿ ಸಿಎಂ ಯಾರಾಗಲಿದ್ದಾರೆಂಬ ಕುತೂಹಲಕ್ಕೆ ಶೀಘ್ರವೇ ತೆರೆ ಬೀಳಲಿದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ಧರಾಮಯ್ಯ ಸಿಎಂ ಹುದ್ದೆ ರೇಸ್ ನಲ್ಲಿದ್ದಾರೆ.

ಈ ನಡುವೆ ಮಾಜಿ ಸಿಎಂ ಸಿದ್ಧರಾಮಯ್ಯ ಇಂದು ಮಧ್ಯಾಹ್ನ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನ ಭೇಟಿಯಾಗಿ ಚರ್ಚಿಸಲಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಮತ್ತೆ ಸಿಎಂ ಸ್ಥಾನ ಸಿಗುವ ವಿಶ್ವಾಸದಲ್ಲಿದ್ದು, 12 ಗಂಟೆಗೆ ಹೆಚ್ ಎಎಲ್ ಏರ್ ಪೋರ್ಟ್ ನಿಂದ ದೆಹಲಿಗೆ  ತೆರಳಲಿದ್ದಾರೆ. ಸಿದ್ಧರಾಮಯ್ಯ ಜೊತೆ ಶಾಸಕ ಜಮೀರ್ ಅಹ್ಮದ್ ಖಾನ್ ಸಹ ತೆರಳಲಿದ್ದಾರೆ. ಈ ಮಧ್ಯೆ ಇನ್ನೂ ಸಿದ್ಧರಾಮಯ್ಯ ನಿವಾಸದಲ್ಲಿ ತಮ್ಮ ತಂತ್ರಗಾರಿಕೆ ಮುಂದುರೆಸಿದ್ದಾರೆ.

ಹಾಗೆಯೇ ಎಐಸಿಸಿ ವೀಕ್ಷಕರು ಶಾಸಕರಿಂದ ಅಭಿಪ್ರಾಯ ಸಂಗ್ರಹಿಸಿ ಈಗಾಗಲೇ  ದೆಹಲಿಗೆ ತೆರಳಿದ್ದು, ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಜೊತೆ ಚರ್ಚಿಸಿ ಬಳಿಕ ಸಿಎಂ ಯಾರಿಗೆ ಎಂಬುದು ಘೋಷಣೆಯಾಗುವ ಸಾಧ್ಯತೆ ಇದೆ.

Key words: Former CM- Siddaramaiah – Delhi – afternoon.