ಮುಕ್ತ ಮತ್ತು ಪಾರದರ್ಶಕ ಚುನಾವಣೆ ನಡೆಯುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಮಾಜಿ ಸಿಎಂ ಸಿದ್ಧರಾಮಯ್ಯ.

ಬೆಂಗಳೂರು,ನವೆಂಬರ್,23,2022(www.justkannada.in): ಬೆಂಗಳೂರಿನಲ್ಲಿ ನಡೆದ ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಕ್ತ ಮತ್ತು ಪಾರದರ್ಶಕ ಚುನಾವಣೆ ನಡೆಯುವ ಬಗ್ಗೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಿದ್ಧರಾಮಯ್ಯ, ಬಿಜೆಪಿಯವರು ಈ ರೀತಿ ಮಾಡುವುದನ್ನ ನೋಡಿದರೇ ಪಾರದರ್ಶಕ ಚುನಾವಣೆ ಸಾಧ್ಯವಾ..?  ಎಂಬ ಆಂತಕ ಶುರುವಾಗಿದೆ.  ಪ್ರಕರಣ ಗಂಭೀರವಾಗಿದ್ದರೂ ಸಿಎಂ  ಬಸವರಾಜ ಬೊಮ್ಮಾಯಿ ಲಘುವಾಗಿ ಮಾತನಾಡುತ್ತಾರೆ.  ಮಾತೆತ್ತಿದ್ದರೇ ನಿಮ್ಮ ಅವಧಿಯಲ್ಲಿ ಆಗಿರಲಿಲ್ವಾ ಅಂತಾರೆ.  ಬಿಜೆಪಿಯವರಿಗೆ ಅಂಟು ರೋಗ ಬಂದಿದೆ ಎಂದು ಕಿಡಿಕಾರಿದರು.

Key words: Former CM- Siddaramaiah – concern – free – transparent- elections.