ಏಕಪತ್ನಿ ವ್ರತಸ್ಥರೇ ಎಂಬ ಸಚಿವ ಡಾ.ಕೆ ಸುಧಾಕರ್ ಹೇಳಿಕೆಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು ಹೀಗೆ..?

ಬೆಂಗಳೂರು,ಮಾರ್ಚ್,24,2021(www.justkannada.in):  ಏಕಪತ್ನಿ ವ್ರತಸ್ಥರೇ ಎಂಬ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಇಲ್ಲಿ ಎಲ್ಲರ ಮನೆಯ ದೋಸಿಯೂ ತೂತೆ. ಸಚಿವರಾಗಿ ಸುಧಾಕರ್ ಇಂತಹ ಹೇಳಿಕೆ ಕೊಡಬಾರದು ಎಂದಿದ್ದಾರೆ.jk

ಈ ಕುರಿತು ಮಾತನಾಡಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ನಾನು ಒಂದು ಬಾರಿ ಜೀವನದಲ್ಲಿ ತಪ್ಪು ಮಾಡಿದ್ದೇನೆ. ನನ್ನ ತಪ್ಪನ್ನು ನಾನು ಈಗಾಗಲೇ ಒಪ್ಪಿಕೊಂಡಿದ್ದೇನೆ. ಇದೇ ವಿಚಾರವನ್ನು ಸದನದಲ್ಲೂ ತಿಳಿಸಿದ್ದೇನೆ. ಇಲ್ಲಿ ಎಲ್ಲರ ಮನೆಯ ದೋಸೆಯೂ ತೂತೆ ಎಂದು ಟಾಂಗ್ ನೀಡಿದರು.Former CM -HD Kumaraswamy-statement - Minister -Dr K Sudhakar.

ಹಾಗೆಯೇ ಇಲ್ಲಿ ನನ್ನ ಹೆಸರು ಯಾಕೆ ತಂದರು ಗೊತ್ತಿಲ್ಲ ಎಂದ ಹೆಚ್.ಡಿ ಕುಮಾರಸ್ವಾಮಿ, ಸಚಿವರಾಗಿ ಮಾಡೋದಕ್ಕೆ ಕೆಲಸ ಬಹಳ ಇರುತ್ತದೆ. ರಾಜ್ಯದ ಜನರು ವಿವಿಧ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆ ಬಗ್ಗೆ ಗಮನ ಕೊಡಬೇಕು. ಇದು ಸಚಿವರ ಜವಾಬ್ದಾರಿಯಾಗಿದೆ. ಇಂತಹ ಹೇಳಿಕೆ ಕೊಡೋ ಮೊದಲು ಯೋಚಿಸಬೇಕಿತ್ತು. ಜವಾಬ್ದಾರಿಯುತ ಸಚಿವರಾಗಿ ಹೀಗೆ ಹೇಳಬಾರದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

Key words: Former CM -HD Kumaraswamy-statement – Minister -Dr K Sudhakar.