ಶಾಸಕ ಜಮೀರ್ ಅಹ್ಮದ್ ಖಾನ್ ರನ್ನ ಹರಕೆಯ ಕುರಿ ಎಂದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ.

ವಿಜಯಪುರ,ಅಕ್ಟೋಬರ್,22,2021(www.justkannada.in): ಸಿಂದಗಿ ಉಪಚುನಾವಣೆ ಹಿನ್ನೆಲೆ ಭರ್ಜರಿ ಪ್ರಚಾರದಲ್ಲಿ ತೊಡಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ರನ್ನ ಹರಕೆಯ ಕುರಿ ಎಂದಿದ್ದಾರೆ.

2004ರ ಉಪ ಚುನಾವಣೆಯಲ್ಲಿ ಜಮೀರ್ ಅಹ್ಮದ್ ಖಾನ್ ಗೆ ಟಿಕೆಟ್ ನೀಡಿದ್ದವು. ಆಗ ಸಿದ್ಧರಾಮಯ್ಯ ನಮ್ಮ ಪಕ್ಷದಲ್ಲಿ ಡಿಸಿಎಂ ಆಗಿದ್ದರು. ಆ ವೇಳೆ ಹರಕೆ ಕುರಿ ಕರೆದುಕೊಂಡು ಹೋಗಿ ನಿಲ್ಸಿದ್ದಾರೆ ಎಂದಿದ್ದರು. ಈಗ ಅದೇ ಹರಕೆಯ ಕುರಿಯನ್ನ ತಮ್ಮ ಬಳಿ ಇಟ್ಟುಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.

ಹಾಗೆಯೇ  ಅವರಪ್ಪನಾಣೆ ಸಿಎಂ ಆಗಲ್ಲ ಅಂತಿದ್ರು. ನಂತರ ನಮ್ಮ ಮನೆಗೆ ಅವರೇ ಬಂದ್ರು.  ನಾನು ಸಿಎಂ ಆದೆ. ಮತಪಡೆಯಲಷ್ಟೇ ಕಾಂಗ್ರೆಸ್ ನವರು ಆರೋಪ ಮಾಡ್ತಾರೆ. ಜೆಡಿಎಸ್ ಕೆಣಕಿದಷ್ಟು ಕಾಂಗ್ರೆಸ್ ಮುಗಿಯುತ್ತೆ ಎಂದು ಹೆಚ್.ಡಿ ಕುಮಾರಸ್ವಾಮಿ ಎಚ್ಚರಿಸಿದರು.

Key words: Former CM- HD Kumaraswamy – spreading -sheep – MLA -Jameer Ahmed Khan.