20 ಕೋಟಿ ಕೊಟ್ರೆ ಸಮೀಕ್ಷೆಯಲ್ಲಿ 129 ಸ್ಥಾನ ನೀಡುತ್ತವೆ ಕೆಲ ಮಾಧ್ಯಮಗಳು: ಎಚ್.ಡಿ.ಕುಮಾರಸ್ವಾಮಿ ಟೀಕೆ

ಬೆಂಗಳೂರು, ಏಪ್ರಿಲ್ 30, 2023 (www.justkannada.in): ಚುನಾವಣಾ ಪೂರ್ವ ಸಮೀಕ್ಷೆಗಳ ಕುರಿತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಮಾಧ್ಯಮಗಳು ನಡೆಸಿರುವ ಸಮೀಕ್ಷೆಯಲ್ಲಿ ಜೆಡಿಎಸ್‌ ಗೆ ಈ ಬಾರೀ 29 ಸ್ಥಾನಗಳು ಬರಲಿದೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

ನಾನು ಯಾವುದಾದರೂ ಖಾಸಗಿ ಸಮೀಕ್ಷೆ ನಡೆಸಿ ಯಾವುದಾದರೂ ಸುದ್ದಿ ವಾಹಿನಿಗೆ 10 ಕೋಟಿಯಿಂದ 20 ಕೋಟಿ ನೀಡಿದರೇ 29 ಸ್ಥಾನ ಇದ್ದದ್ದು, ನಾಳೆಗೆ 129 ಸ್ಥಾನ ಆಗುತ್ತದೆ ಎಂದು ಆರೋಪಿಸಿದ್ದಾರೆ.

ಜನಬಲ ಇದ್ದರೂ ನನಗೆ ಹಣದ ಕೊರತೆ ಇದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌ ಹಾಗೂ ಬಿಜೆಪಿ ರೀತಿ ಕಮಿಷನ್‌ ಪಡೆದಿದ್ದರೆ ಇವತ್ತು ನಾನು ದುಡ್ಡು ಚೆಲ್ಲಿ ಮತ ಪಡೆಯಬಹುದಿತ್ತು ಎಂದಿದ್ದಾರೆ.