ಕಾಂಗ್ರೆಸ್ ನಿಂದ ಒಂದು ಸಮಾಜವನ್ನ ಓಲೈಸುವ ಕೆಲಸ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟೀಕೆ.

 

ರಾಮನಗರ,ಜುಲೈ,27,2021(www.justkannada.in):  ಕಾಂಗ್ರೆಸ್ ನಿಂದ ಒಂದು ಸಮಾಜವನ್ನ ಓಲೈಸುವ ಕೆಲಸ ನಡೆಯುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ.jk

ರಾಮನಗರದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಮುಂದಿನ ಬಾರಿಗೆ ಸಿಎಂ ಸ್ಥಾನಕ್ಕೆ ಟವಲ್ ಹಾಕಿ ಕುಳಿತಿರುವವರು ಯಡಿಯೂರಪ್ಪ ಭ್ರಷ್ಟ ಸಿಎಂ,ಮುಂದೆ ಬರುವವರು ಭ್ರಷ್ಟರೇ ಎಂದು ಟೀಕಿಸುತ್ತಾರೆ. ಇನ್ನೊಂದು ಕಡೆ ಯಡಿಯೂರಪ್ಪ ಅವರ ನಿರ್ಗಮನದ ವಿಚಾರದಲ್ಲಿ ಬಿಜೆಪಿ ಪಕ್ಷದ ಹೈಕಮಾಂಡ್ ವಿರದ್ದವೂ ಮಾತನಾಡುತ್ತಾರೆ. ಇವೆಲ್ಲ ಆ ಸಮಾಜದ  ಅನುಕಂಪ ಗಿಟ್ಟಿಸಿಕೊಳ್ಳುವ ರಾಜಕೀಯ ಕುತಂತ್ರ  ನಡೆಗಳು ಎಂದು ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದರು.

ಜೆಡಿಎಸ್‍ ಗೆ ಮುಂದೆ ಒಳ್ಳೆಯ ಭವಿಷ್ಯವಿದೆ ಎಂಬ ವಿಶ್ವಾಸ ನನಗಿದೆ.. ತಾಯಿ ಚಾಮುಂಡೇಶ್ವರಿ ನನಗೆ ಅಧಿಕಾರ ಕೊಡ್ತಾಳೆ. ರಾಜ್ಯದ ಜನರ ಪರವಾಗಿ ಜೆಡಿಎಸ್ ಮುಂದೆ ಕೆಲಸ ಮಾಡಲಿದೆ,”ಜೆಡಿಎಸ್ ಮುಗಿದೇ ಹೋಯ್ತು ಎನ್ನುವವರಿಗೆ ಮುಂದೆ ಉತ್ತರ ಸಿಗಲಿದೆ ಎಂದು ಹೇಳಿದರು.

ಮುಂದಿನ ಸಿಎಂ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ, ಅದು ಅವರ ಪಕ್ಷದ ಆಂತರಿಕ ವಿಚಾರ. ಅದರ ಬಗ್ಗೆ ಯಾವುದೇ ಮಾಹಿತಿ ನನಗೆ ತಿಳಿದಿಲ್ಲ. ಈಗಾಗಲೇ ಪ್ರಧಾನಿ ಮೋದಿಯವರು ರಾಜ್ಯದ ಬಗ್ಗೆ ಮಾಹಿತಿ ಪಡೆದಿರುತ್ತಾರೆ. ಹಾಗಾಗಿ ಯಾರು ಸಿಎಂ ಆಗಬೇಕೆಂದು ಅವರ ಪಕ್ಷ ನಿರ್ಧಾರ ಮಾಡುತ್ತದೆ. ಎಂದು ತಿಳಿಸಿದರು.

Key words: Former CM- HD Kumaraswamy –criticized- Congress.