ದೇಗುಲ ತೆರವು ಮಾಡಲು ಬಿಜೆಪಿ ಸರ್ಕಾರವೇ ಕಾರಣ-ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ.

ಬೆಂಗಳೂರು,ಸೆಪ್ಟಂಬರ್,14,2021(www.justkannada.in):   ರಾಜ್ಯದಲ್ಲಿ ಅನಧಿಕೃತ ದೇವಾಲಯಗಳ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶ ರಾತ್ರೋರಾತ್ರಿ ಪಾಲನೆಯಾಗುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ.

ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ದೇಗುಲಗಳ ತೆರವು ಮಾಡಲು ಬಿಜೆಪಿ ಸರ್ಕಾರವೇ ಕಾರಣ.  ಒಂದು ಕಡೆ ದೇವಾಲಯ ತೆರವು ಮಾಡುತ್ತಿದ್ದಾರೆ.  ಮತ್ತೊಂದು ಕಡೆ ಬಿಜೆಪಿಯವರಿಂದಲೇ ಪ್ರತಿಭಟನೆ ನಡೆಯುತ್ತಿದೆ ಜನರನ್ನ ಡೈವರ್ಟ್ ಮಾಡಲು ಈ ಕೆಲಸ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.

ಸರ್ಕಾರ ಮನಸ್ಸು ಮಾಡಿದರೇ ದೇಗುಲಗಳ ತೆರವು ನಿಲ್ಲಿಸಬಹುದು  ಸುಪ್ರೀಂಕೋರ್ಟ್ ಆದೇಶ ರಾತ್ರೋರಾತ್ರಿ ಪಾಲನೆಯಾಗುತ್ತಿದೆ. ಈ ಹಿಂದೆ ಯಾವತ್ತಾದರೂ ರಾತ್ರೋರಾತ್ರಿ ಪಾಲನೆಯಾಗಿದೆಯಾ..? ಸುಪ್ರೀಂಕೋರ್ಟ್  ಆದೇಶ ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಬೇಕು ಎಂದು ಸಲಹೆ ನೀಡಿದರು.

key words: Former CM -HD Kumaraswamy – BJP government- move – clear -temple