Saturday, October 10, 2026

Dasara Wishes

Happy Dasara
Home Front Page ಚುನಾವಣಾ ಫಲಿತಾಂಶ ಬಂದ ಮೇಲೆ ಕಳ್ಳೆತ್ತು ಯಾರೆಂದು ಗೊತ್ತಾಗುತ್ತೆ- ಸಿಎಂಗೆ BSY  ಟಾಂಗ್

ಚುನಾವಣಾ ಫಲಿತಾಂಶ ಬಂದ ಮೇಲೆ ಕಳ್ಳೆತ್ತು ಯಾರೆಂದು ಗೊತ್ತಾಗುತ್ತೆ- ಸಿಎಂಗೆ BSY  ಟಾಂಗ್

ಬಾಗಲಕೋಟೆ,ಏಪ್ರಿಲ್,6,2026 (www.justkannada.in): ಬಿಜೆಪಿಯವರು ಕಳ್ಳೆತ್ತುಗಳು ಎಂಬ  ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.

ಬಾಗಲಕೋಟೆಯಲ್ಲಿ ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಸಿಎಂ ಸಿದ್ದರಾಮಯ್ಯ ಅವರು ಹುಚ್ಚುಚ್ಚಾಗಿ ಏನು ಬೇಕಾದರೂ ಹೇಳಲಿ.  ಕಳ್ಳೆತ್ತು ಯಾರೆಂದು ಚುನಾವಣಾ ಫಲತಾಂಶ ಬಂದ ಮೇಲೆ ಗೊತ್ತಾಗುತ್ತದೆ ಎಂದು ಟಾಂಗ್ ಕೊಟ್ಟರು.

ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ವಾತಾವರಣವಿದೆ.  ವೀರಣ್ಣ ಚರಂತಿಮಠ 10 ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲುತ್ತಾರೆ.  ದಾವಣಗೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ.  ಬಿವೈ ವಿಜಯೇಂದ್ರ ಸಿದ್ದೇಶ್ವರ್ ಸೇರಿ ಎಲ್ಲರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

ಸಿದ್ದರಾಮಯ್ಯಗೆ ಪಾಠ ಕಲಿಬೇಕೆಂದು ಜನ ತೀರ್ಮಾನ ಮಾಡಿದ್ದಾರೆ.  ಅವರ ಸಮಾಜದ ವ್ಯಕ್ತಿ ಬಾಗಲಕೋಟೆಯಲ್ಲಿ ಸ್ಪರ್ಧೆ ಮಾಡಿದ್ದಾರೆ. ಆ ಕಾರಣಕ್ಕೆ ಸಿದ್ದರಾಮಯ್ಯ ಬಾಗಲಕೋಟೆಗೆ ಪದೇ ಪದೇ ಬರುತ್ತಿದ್ದಾರೆ. ಸಿದ್ದರಾಮಯ್ಯ ಜಾತಿ ರಾಜಕಾರಣ ಮಾಡುವ ಕೆಲಸ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ 4 ದಿನ  ಇಲ್ಲೇ ಕ್ಯಾಂಪ್ ಮಾಡಿ ರೋಡ್ ಶೋ ಮಾಡುತ್ತಿದ್ದಾರೆ.  ಸಿದ್ದರಾಮಯ್ಯಗೆ ಸೋಲಿನ ಭಯ ಕಾಡುತ್ತಿದೆ. ಉಪಚುನಾವಣೆಯಲ್ಲಿ ಗ್ಯಾರಂಟಿ ಮತ್ತೊಂದು ಅನ್ನೋದು ಪ್ರಶ್ನೆ ಇಲ್ಲ ಎಂದರು.

Key words: Bagalkote, by-election, Former CM, BSY, CM Siddaramaiah