ರಾಜೀನಾಮೆ ನೀಡಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದ ಯುವಕನ ಮನೆಗೆ ಮಾಜಿ ಸಿಎಂ ಬಿಎಸ್ ಯಡಯೂರಪ್ಪ ಭೇಟಿ.

ಚಾಮರಾಜನಗರ,ಜುಲೈ,30,2021(www.justkannada.in): ಬಿಎಸ್ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆ ಮನನೊಂದು ಗುಂಡ್ಲುಪೇಟೆಯ ಬೊಮ್ಮಾಪುರದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದನು. ಈ ಮಧ್ಯೆ ಮೃತ ಯುವಕನ ಮನೆಗೆ  ಇಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಭೇಟಿ ನೀಡುತ್ತಿದ್ದಾರೆ.

ಇಂದು ಗುಂಡ್ಲುಪೇಟೆಯ ಬೊಮ್ಮಾಪುರಕ್ಕೆ ಬಿಎಸ್ ಯಡಿಯೂರಪ್ಪ ಆಗಮಿಸಿದ್ದಾರೆ. ಮೃತ ಯುವಕನ ಮನೆಗೆ ಬಿಎಸ್ ಯಡಿಯೂರಪ್ಪ ಭೇಟಿ ನೀಡುತ್ತಿದ್ದಾರೆ. ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಚಾಮರಾಜ ನಗರ ಜಿಲ್ಲೆಗೆ ಬಿಎಸ್ ವೈ ಆಗಮಿಸಿದ್ದಾರೆ.

ಹೆಲಿಕಾಪ್ಟರ್ ಮೂಲಕ ಬೆಂಗಳೂರಿನಿಂದ ನೇರವಾಗಿ ಗುಂಡ್ಲುಪೇಟೆಗೆ  ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಆಗಮಿಸಿದ್ದಾರೆ. ಮಾಜಿ ಸಿಎಂ ಬಿಎಸ್ ವೈಗೆ ಪುತ್ರ ಬಿವೈ ವಿಜಯೇಂದ್ರ, ಶಾಸಕ ನಿರಂಜನ್ ಕುಮಾರ್ ಹಾಗೂ ಸ್ಥಳೀಯ ನಾಯಕರು ಸಾಥ್ ನೀಡಿದ್ದಾರೆ.

Key words: Former CM -BS Yeddyurappa -visits –chamarajnagar- young man –death