EVM  ಮೇಲೆ ನಂಬಿಕೆ ಇಲ್ಲ ಅಂದ್ರೆ ರಾಜೀನಾಮೆ ಕೊಟ್ಟು ಬನ್ನಿ- ಮಾಜಿ ಸಿಎಂ ಬೊಮ್ಮಾಯಿ ಸವಾಲು

ಬೆಂಗಳೂರು,ಸೆಪ್ಟಂಬರ್,6,2025 (www.justkannada.in):  ರಾಜ್ಯ ಕಾಂಗ್ರೆಸ್ ಸರ್ಕಾರ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಕೆಗೆ ನಿರ್ಧರಿಸಿರುವುದಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಂಸದ ಬಸವರಾಜ ಬೊಮ್ಮಾಯಿ,  ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ನಲ್ಲಿ ಅಕ್ರಮ ನಡೆದಿತ್ತು. ಹೀಗಾಗಿ  ಅಕ್ರಮ ತಪ್ಪಿಸಲು ಇವಿಎಂ ತರಲಾಗಿದೆ.  ಸಿದ್ದರಾಮಯ್ಯ ಗೆದ್ದಿದ್ದೇ ಇವಿಎಂನಿಂದ ಎಂದು ಟಾಂಗ್ ಕೊಟ್ಟರು.

ಇವಿಎಂ ಮೇಲೆ  ನಂಬಕೆ ಇಲ್ಲ  ಅಂದರೆ ರಾಜೀನಾಮೆ ಕೊಟ್ಟು ಬನ್ನಿ. ರಾಜೀನಾಮೆ ಕೊಟ್ಟು ನಂತರ ಇವಿಎಂ ಸರಿ ಇಲ್ಲ ಎಂದು ಮಾತನಾಡಿ ಎಂದು ಕಾಂಗ್ರೆಸ್ ನಾಯಕರಿಗೆ  ಮಾಜಿ ಸಿಎಂ ಬೊಮ್ಮಾಯಿ ಸವಾಲು ಹಾಕಿದರು.

Key words: EVM, resign,  former CM, Bommai, challenges, Congress