ಬರ ಘೋಷಣೆ ಮಾಡದೇ ಕೇಂದ್ರದ ಮೇಲೆ ನೆಪ ಹೇಳುತ್ತಿದ್ದಾರೆ- ಸರ್ಕಾರದ ವಿರುದ್ದ ಮಾಜಿ ಸಿಎಂ ಬೊಮ್ಮಾಯಿ ವಾಗ್ದಾಳಿ.

ಹಾವೇರಿ,ಸೆಪ್ಟಂಬರ್,9,2023(www.justkannada.in):  ರಾಜ್ಯದಲ್ಲಿ ಸರಿಯಾಗಿ ಮಳೆಯಾಗದೇ ಬರದ ಛಾಯೆ ಆವರಿಸಿದೆ. ಆದರೂ ಸಹ ರಾಜ್ಯ ಸರ್ಕಾರ ಬರ ಘೋಷಣೆ ಮಾಡದೇ ಕೇಂದ್ರದ ಮೇಲೆ ನೆಪ ಹೇಳುತ್ತಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಜುಲೈನಲ್ಲೇ ಬರ  ಘೋಷಣೆ ಅಂತೇಳಿ ಈವರೆಗೂ ಘೋಷಣೆ ಮಾಡಿಲ್ಲ. ಕೇಂದ್ರ ಸರ್ಕಾರ ಪತ್ರ ಬರೆದಿದ್ದೇವೆ ಅಂತಿದ್ದಾರೆ ಬರಗಾಲ ಮುಗಿಯುತ್ತಾ ಬಂತು ಈಗೇನು ಘೋಷಣೆ ಮಾಡುತ್ತಾರೆ ಎಂದು ಕಿಡಿಕಾರಿದರು.

ಬರಗಾಲ ಘೋಷಣೆ ಮಾಡದೇ ಸುಮ್ಮನೆ ಮುಂದಕ್ಕೆ ಹಾಕುತ್ತಾರೆ. ಜಿಲ್ಲಾಧಿಕಾರಿ ಖಾತೆಯಲ್ಲಿ ಹಣವಿದೆ ಯಾಕೆ ಬಳಕೆ ಮಾಡುತ್ತಿಲ್ಲ. ಮುಹೂರ್ತ ನೋಡುತ್ತಿದ್ದಾರೆ ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎಂದು ಪ್ರಶ್ನಿಸಿದರು.

ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕೊರೆತೆ ಇದೆ ಸರ್ಕಾರ ಹಣಕಾಸು ನೆರವು ನೀಡಿ ವಿದ್ಯುತ್ ಖರೀದಿ ಮಾಡಬೇಕು ಎಂದು ಬೊಮ್ಮಾಯಿ ಆಗ್ರಹಿಸಿದರು.

Key words: Former CM- Basavaraj Bommai –Govt- not declaring -drought.