Wednesday, August 19, 2026

BDA Apartments

Home Front Page ದಿ.ಅನಂತ್ ಕುಮಾರ್ ಅವರ 3ನೇ ಪುಣ್ಯಸ್ಮರಣೆ; ನ.12 ರಂದು ಉಪನ್ಯಾಸ ಮತ್ತು ‘ಅನಂತ ಸ್ಮೃತಿ ನಡಿಗೆ’...

ದಿ.ಅನಂತ್ ಕುಮಾರ್ ಅವರ 3ನೇ ಪುಣ್ಯಸ್ಮರಣೆ; ನ.12 ರಂದು ಉಪನ್ಯಾಸ ಮತ್ತು ‘ಅನಂತ ಸ್ಮೃತಿ ನಡಿಗೆ’ ಕಾರ್ಯಕ್ರಮ.

ಬೆಂಗಳೂರು,ನವೆಂಬರ್,10,2021(www.justkannada.in): ಮಾಜಿ ಕೇಂದ್ರ ಸಚಿವ ದಿ.ಅನಂತ್ ಕುಮಾರ್ ಅವರ ಪುಣ್ಯಸ್ಮರಣೆ ಅಂಗವಾಗಿ ನವೆಂಬರ್ 12 ರಂದು ಉಪನ್ಯಾಸ ಮತ್ತು ಮತ್ತು ಅನಂತ ಸ್ಮೃತಿ ನಡಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ.

ನವೆಂಬರ್ 12 ರಂದು 4 ಗಂಟೆಗೆ  ಬೆಂಗಳೂರಿನ ಜಯನಗರದ ಆರ್ ವಿ ಟೀಚರ್ಸ್ ಕಾಲೇಜಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.   ದಿ. ಅನಂತ್ ಕುಮಾರ್ ಅವರ ಪುಣ್ಯಸ್ಮರಣೆ ಅಂಗವಾಗಿ ಪ್ರಗತಿಪರ ರಾಜಕೀಯ ಹಾಗೂ ರಾಷ್ಟ್ರ ನಿರ್ಮಾಣ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಉಪನ್ಯಾಸ ನೀಡಲಿದ್ದಾರೆ.

ಇನ್ನು ಸಂಜೆ 6.00 ಗಂಟೆಗೆ  ಅನಂತ್ ಕುಮಾರ್ ಅವರಿಗೆ ನಮನ ಸಲ್ಲಿಕೆ, ಪಂಜಿನ ಮೆರವಣಿಗೆಯ ಮೂಲಕ ಅನಂತ ಸ್ಮೃತಿ ನಡಿಗೆ ಕಾರ್ಯಕ್ರಮ ನೆರವೇರಲಿದೆ. ಆರ್‌ವಿ ಶಿಕ್ಷಕರ ಕಾಲೇಜು- ಲಾಲ್‌ಬಾಗ್ ಪಶ್ಚಿಮ ದ್ವಾರ, ವಿವಿಪುರಂ ವೃತ್ತ, ಡಿವಿಜಿ ವೃತ್ತ, ಗಾಂಧಿ ಬಜಾರ್ ಮುಖ್ಯ ರಸ್ತೆ ಮೂಲಕ ಅನಂತ ಸ್ಮೃತಿ ನಡಿಗೆ ಸಾಗಿ ಸ್ವಾಮಿ ವಿವೇಕಾನಂದ ಪ್ರತಿಮೆ, ಅದಮ್ಯ ಚೇತನ ಬಳಿ ಕೊನೆಗೊಳ್ಳಲಿದೆ.

ಈ ಎರಡೂ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಹೆಸರು ನೊಂದಾಯಿಸಲು https://forms.gle/X4BKD5dnwbbPYicf8 ಇಲ್ಲಿಗೆ ಭೇಟಿ ನೀಡಿ.

Key words: former central minister-Ananth Kumar- Remembrance- Program- November-12