ಉತ್ತರ ಕರ್ನಾಟಕ ಅಭಿವೃದ್ದಿಗೆ ಕಿತ್ತೂರು ಕರ್ನಾಟಕ ಮಂಡಳಿ ರಚನೆ- ಸಿಎಂ ಬಸವರಾಜ ಬೊಮ್ಮಾಯಿ.

ವಿಜಯಪುರ,ಮಾರ್ಚ್,21,2023(www.justkannada.in): ಉತ್ತರ ಕರ್ನಾಟಕ ಅಭಿವೃದ್ದಿಗೆ ಕಿತ್ತೂರು ಕರ್ನಾಟಕ ಮಂಡಳಿ ರಚನೆ ಮಾಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿಜಯಪುರ ಜಿಲ್ಲೆ ಮುದ್ದೆಬಿಹಾಳ ತಾಲ್ಲೂಕಿನ ನಾಲತವಾಡದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ,  ನಮ್ಮ ಸರ್ಕಾರದ ಕೆಲಸಗಳೇ ನಮ್ಮ ಗ್ಯಾರಂಟಿ. ಮೋಸ ಮಾಡೋದು ಸುಳ್ಳು ಆಶ್ವಾಸನೆ ನೀಡೋದು ಗ್ಯಾರಂಟಿ ಅಲ್ಲ. ಕಾಂಗ್ರೆಸ್ ನ ಗ್ಯಾರಂಟಿ ನಂಬೋಕೆ ಇದು ಛತ್ತೀಸ್ ಘಡ, ರಾಜಸ್ತಾನ ಅಲ್ಲ. ಇದು ಕರ್ನಾಟಕ. ಕರ್ನಾಟಕದ ಜನತೆ ಬಹಳ ಜಾಣರಿದ್ದಾರೆ  ಎಂದರು.

ಕೃಷ್ಣೇಯ ಮೇಲೆ ಅಣೆ ಮಾಡಿ ಅಧಿಕಾರಕ್ಕೆ ಬಂದರು. ಕೃಷ್ಣಾ ಯೋಜನೆಗೆ ವರ್ಷಕ್ಕೆ 10 ಸಾವಿರ ಕೋಟಿ ಕೊಡ್ತೇವೆ ಅಂದರು. ಈಗ ನೀವು ಕೊಟ್ಟಿರೋದು 6 ಸಾವಿರ ಕೋಟಿ  ರೂ. ಮಾತ್ರ ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್ ಗೆ ಸಿಎಂ ಬೊಮ್ಮಾಯಿ ಪರೋಕ್ಷ ಟಾಂಗ್ ನೀಡಿದರು. ಮುದ್ದೆ ಬಿಹಾಳ ಮಾದರಿಯಲ್ಲೆ ಎಲ್ಲಾ ಕ್ಷೇತ್ರಗಳ ಅಭಿವೃದ್ದಿ ಮಾಡಲಾಗುತ್ತದೆ ಎಂದು ತಿಳಿಸಿದರು.

Key words: Formation – Kittur- Karnataka -Board -North Karnataka –Development- CM Basavaraja Bommai.