ಮೋದಿ, ಶಾ ವಿರುದ್ದ ಗುಡುಗು: ನಾವು ಸರ್ಕಾರ ರಚನೆ ಮಾಡುತ್ತೇವೆಯೋ ಇಲ್ಲವೋ ನಾಳೆ ನಿರ್ಧಾರ-ರಾಹುಲ್ ಗಾಂಧಿ

ನವದೆಹಲಿ,ಜೂನ್,4,2024 (www.justkannada.in): INDIA ಮೈತ್ರಿಕೂಟದ ನಾಯಕರ ಜೊತೆ ನಾಳೆ ಸಭೆಯಿದೆ. ನಾವು ಸರ್ಕಾರ ಮಾಡುತ್ತೇವೆಯೋ ಇಲ್ವೋ ನಾಳೆ ಹೇಳ್ತೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ.

ಲೋಕಸಭಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ನವದೆಹಲಿಯ ಎಐಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ,  ಇಂಡಿಯಾ ಮೈತ್ರಿಕೂಟದ ನಾಯಕರ ಜೊತೆ ನಾಳೆ ಸಭೆಯಿದೆ. ನಾವು ಸರ್ಕಾರ ಮಾಡುತ್ತೇವೆಯೋ ಇಲ್ವೋ ನಾಳೆ ಹೇಳ್ತೇವೆ. ಇಂಡಿಯಾ ಒಕ್ಕೂಟದ ಸಹಪಾಠಿಗಳನ್ನು ಕೇಳದೆಯೇ ಹೇಳಲ್ಲ. ನಾವು ಈಗಲೇ ಯಾವುದನ್ನೂ ನಿರ್ಧಾರ ಮಾಡುವುದಿಲ್ಲ. ನಾಳೆ INDIA ಮೈತ್ರಿಕೂಟ ಎಲ್ಲವನ್ನೂ ನಿರ್ಧಾರ ಮಾಡಲಿದೆ. ಸರ್ಕಾರ ರಚನೆಗೆ ಬಹಳ ಫೈನ್​ಲೈನ್ ಇದೆ. ಎಲ್ಲವನ್ನೂ ನಾಳೆಯ ಸಭೆಯಲ್ಲಿ ನಿರ್ಧಾರ ಮಾಡುತ್ತೇವೆ ಎಂದರು.

ಇದೇ ವೇಳೆ ಮೋದಿ ಅಮಿತ್ ಶಾ ವಿರುದ್ದ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಸಂವಿಧಾನ ಉಳಿಸುವ ಕೆಲಸವನ್ನ ಮಾಡಬೇಕಿತ್ತು. ಆದರೆ ಮೋದಿ, ಅಮಿತ್ ಶಾ ಎಲ್ಲವನ್ನು ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದ್ದರು. ನಮ್ಮನ್ನ ಹೆದರಿಸಿದರು ದಬ್ಬಾಳಿಕೆ ಮಾಡಿದರು. ಹೀಗಾಗಿ ಇಡೀ ಆಡಳಿತ ವ್ಯವಸ್ಥೆ ವಿರುದ್ದ ಹೋರಾಟ ಮಾಡಿದ್ವಿ ನಾವು ಕೇವಲ ರಾಜಕೀಯಕ್ಕಾಗಿ ಹೋರಾಟ ಮಾಡಲಿಲ್ಲ  ಎಂದರು.

Key words: form, govt , decide, congress, Rahul Gandhi