ಮೇಲಾಧಿಕಾರಿಗಳ ಕಿರುಕುಳ ಆರೋಪ: ಡೆತ್ ನೋಟ್ ಬರೆದಿಟ್ಟು ಅರಣ್ಯ ವೀಕ್ಷಕ ಆತ್ಮಹತ್ಯೆ

ಮೈಸೂರು,ಏಪ್ರಿಲ್,30,2025 (www.justkannada.in):  ನನ್ನ ಸಾವಿಗೆ ಎಸಿಎಫ್ ಮೇಡಮ್  ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಅರಣ್ಯ ವೀಕ್ಷಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆ ಸರಗೂರು ತಾಲೂಕಿನಲ್ಲಿ ನಡೆದಿದೆ.

ಮೇಲಾಧಿಕಾರಿಗಳು ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಅರಣ್ಯ ವೀಕ್ಷಕ ಪಿ.ಸುರೇಶ್ (34) ಆತ್ಮಹತ್ಯೆಗೆ ಶರಣಾಗಿದ್ದಾರೆ.  ಎಸಿಎಫ್ ಅಮೃತ ಮಾಯಪ್ಪನವರ್ ವಿರುದ್ಧ ಈ ಆರೋಪ ಕೇಳಿ ಬಂದಿದೆ

ಸುರೇಶ್, ಗುಂಡ್ಲುಪೇಟೆ ತಾಲೂಕು ಬೆರಂಬಾಡಿ ಗ್ರಾಮದ ನಿವಾಸಿಯಾಗಿದ್ದು, ಅರಣ್ಯ ಸಿಬ್ಬಂದಿಗೆ ನೀಡಿದ ಕ್ವಾರ್ಟರ್ಸ್ ನಲ್ಲಿಯೇ ಸಾವನ್ನಪ್ಪಿದ್ದು ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಸುರೇಶ್ ಸಾವಿಗೆ ಎಸಿಎಫ್ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದು, ಸರಗೂರು ಪೊಲೀಸ್  ಠಾಣೆಯಲ್ಲಿ ಹೊಟ್ಟೆನೋವು ತಾಳಲಾರದೇ ಸಾವು ಎಂದು ಪ್ರಕರಣ ದಾಖಲಾಗಿದೆ. ಡೆತ್ ನೋಟ್ ಇದ್ದರೂ ಹೊಟ್ಟೆ ನೋವು ಎಂದು ಎಫ್ ಐ ಆರ್‌ನಲ್ಲಿ ಉಲ್ಲೇಖ ಮಾಡಿದ್ದು ಹಿರಿಯ ಅಧಿಕಾರಿಗಳ ರಕ್ಷಣೆಗೆ ಮುಂದಾದ್ರಾ ಪೊಲೀಸ್ ಅಧಿಕಾರಿಗಳು ಎಂಬ ಅನುಮಾನ ಹುಟ್ಟಿಕೊಂಡಿದೆ. ಇನ್ನು ಸುರೇಶ್ ಸಾವಿಗೆ ನ್ಯಾಯ ಕೊಡಿಸಿ ಎಂದು ಕುಟುಂಬಸ್ಥರು, ಸ್ಥಳೀಯರು ಆಗ್ರಹಿಸಿದ್ದಾರೆ.

Key words: Forest Watcher, commits, suicide ,  death note