ಕಾಡಾನೆ ದಾಳಿಗೆ ಅರಣ್ಯ ಇಲಾಖೆ ವಾಚರ್ ಸಾವು.

ಮೈಸೂರು,ಸೆಪ್ಟಂಬರ್,6,2021(www.justkannada.in): ಕಾಡಾನೆ ದಾಳಿಗೆ ಅರಣ್ಯ ಇಲಾಖೆ ವಾಚರ್ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲ್ಲೂಕಿನಲ್ಲಿ ನಡೆದಿದೆ.

ಮೈಸೂರಿನ ಎಚ್.ಡಿ.ಕೋಟೆ ತಾಲ್ಲೂಕಿನ ನಂಜಯ್ಯನ ಕಾಲೋನಿ ನಿವಾಸಿ ಹನುಮಂತಯ್ಯ (56) ಮೃತ ಪಟ್ಟ ಅರಣ್ಯ ಇಲಾಖೆ ವಾಚರ್. ರಾತ್ರಿ ಅರಣ್ಯದಂಚಿನಲ್ಲಿ ಮೂರು ಮಂದಿ ವಾಚರ್ ಗಳು ಕಾವಲಿನಲ್ಲಿದ್ದರು. ಈ ವೇಳೆ ಹಠಾತ್ ಕಾಡಾನೆ ಎದುರು ಬಂದಿದ್ದು, ಈ ಸಮಯದಲ್ಲಿ  ವಾಚರ್ ಗಳು ದಿಕ್ಕಾಪಾಲಾಗಿ ಓಡಿದರು. ಈ ಮಧ್ಯೆ  ಆನೆ ಹಿಮ್ಮೆಟ್ಟಿಸುವಷ್ಟರಲ್ಲಿ ಹನುಮಂತಯ್ಯ ಕುಸಿದು ಬಿದ್ದಿದ್ದು ಈ ವೇಳೆ ಆನೆದಾಳಿಯಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಈ ಕುರಿತು ಮೈಸೂರಿನ ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Forest -Department -watcher -death –elephant- attack-mysore