ಬೆಂಗಳೂರು,ಫೆಬ್ರವರಿ,4,2026 (www.justkannada.in): ಅಧ್ಯಯನದ ಹೆಸರಿನಲ್ಲಿ 15ಕ್ಕೂ ಹೆಚ್ಚು ಶಾಸಕರುಗಳ ವಿದೇಶಿ ಪ್ರವಾಸ ಕೈಗೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಫೆಬ್ರುವರಿ 16 ರಿಂದ ಮಾರ್ಚ್ 3 ರವರೆಗೆ 15ಕ್ಕೂ ಹೆಚ್ಚು ಶಾಸಕರು ವಿದೇಶಿ ಪ್ರವಾಸ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ. ಪಶು ಸಂಗೋಪನಾ ಇಲಾಖೆಯಿಂದ ಅಧ್ಯಯನ ಪ್ರವಾಸ ಇದಾಗಿದ್ದು ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಗೆ ಶಾಸಕರು ಹಾರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಶಾಸಕರ ವಿದೇಶ ಪ್ರವಾಸಕ್ಕೆ ತಯಾರಿ ನಡೆದಿದೆ ಎನ್ನಲಾಗಿದೆ. ಯಾವುದೇ ಸರ್ಕಾರದಲ್ಲೂ ಶಾಸಕರನ್ನ ಆಗಾಗ ಅಧ್ಯಯನದ ಪ್ರವಾಸ ನಡೆಯುತ್ತದೆ.
Key words: Foreign trips, more than, 15 MLAs







