ಕದನ ವಿರಾಮ ಜಾರಿಯಾಗಿರುವುದು ಅಮೆರಿಕ ಮಧ್ಯಸ್ಥಿಕೆಯಿಂದಲ್ಲ- ವಿದೇಶಾಂಗ ಸಚಿವ ಜೈಶಂಕರ್

ನವದೆಹಲಿ,ಮೇ,14,2025 (www.justkannada.in): ಅಮೇರಿಕ ಮಧ್ಯಸ್ಥಿಕೆಯಿಂದಲೇ ಭಾರತ-ಪಾಕಿಸ್ತಾನ ಮಧ್ಯೆ ಕದನ ವಿರಾಮ ಜಾರಿಯಾಗಿರುವುದು ಎಂದು ಬೆನ್ನು ತಟ್ಟಿಕೊಂಡಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ವಿದೇಶಾಂಗ ಇಲಾಖೆ ಸಚಿವ ಜೈ ಶಂಕರ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ವಿದೇಶಾಂಗ ಇಲಾಖೆ ಸಚಿವ ಜೈ ಶಂಕರ್, ಭಾರತ-ಪಾಕಿಸ್ತಾನ ಮಧ್ಯೆ ಕದನ ವಿರಾಮ ಜಾರಿಯಾಗಿರುವುದು ಅಮೇರಿಕ ಮಧ್ಯಸ್ಥಿಕೆಯಿಂದಲ್ಲ. ಎರಡು ರಾಷ್ಟ್ರಗಳ ಡಿಜಿಎಂಒಗಳಿಂದ ಕದನ ವಿರಾಮ ಜಾರಿಯಾಗಿದೆ ಎಂದಿದ್ದಾರೆ.

ಪಾಕ್ ಜೊತೆಯಾವುದೇ ಮಾತುಕತೆ ಇಲ್ಲ. ಜಮ್ಮು ಕಾಶ್ಮೀರ ಸಮಸ್ಯೆ ಪರಿಹಾರಕ್ಕೆ ಮೂರನೇಯವರು ಬೇಡ.   ಡಿಜಿಎಂಒಗಳಿಂದ ಕದನ ವಿರಾಮ ಘೋಷಣೆಯಾಗಿದೆ ಎಂದು ಜೈ ಶಂಕರ್ ತಿಳಿಸಿದ್ದಾರೆ.

ಇನ್ನು ಪ್ರಧಾನಿ ನರೇಂದ್ರ ಮೋದಿ ನಿವಾಸದಲ್ಲಿ ಭದ್ರತ ಸಂಪುಟ ಸಮಿತಿ ಸಭೆ ನಡೆಯುತ್ತಿದ್ದು, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿದೇಶಾಂಗ ಸಚಿವ ಜೈಶಂಕರ್ ಭಾಗಿಯಾಗಿದ್ದಾರೆ.

Key words: Ceasefire, India, Pakistan, Foreign Minister, Jaishankar