ಕಮರಿದ ಭಾರತದ ವಿಶ್ವಕಪ್ ಫುಟ್ಬಾಲ್ ಅರ್ಹತೆ ಕನಸು

ಬೆಂಗಳೂರು, ಜೂನ್ 04, 2021 (www.justkannada.in): ಭಾರತ ಫುಟ್ಬಾಲ್ ತಂಡದ ವಿಶ್ವಕಪ್‌ಗೆ ಅರ್ಹತೆ ಪಡೆಯುವ ಕನಸು ನನಸಾಗಲಿಲ್ಲ.

ಕತರ್ ವಿರುದ್ಧ 0-1 ಅಂತರದ ಸೋಲು ಅನುಭವಿಸುವ ಮೂಲಕ ವಿಶ್ವಕಪ್‌ಗೆ ಅರ್ಹತೆಗಳಿಸುವ ಆಸೆ ಮತ್ತೆ ಕಮರಿತು.

ಅರ್ಹತಾ ಸುತ್ತಿನ ಪಂದ್ಯದಲ್ಲಿ ಏಷ್ಯನ್ ಚಾಂಪಿಯನ್ ವಿರುದ್ಧ ಸುಮಾರು 70 ನಿಮಿಷ ಆಡಿದ ಭಾರತ ನಿರೀಕ್ಷಿತ ಸೋಲು ಅನುಭವಿಸಬೇಕಾಯಿತು.

ಎರಡು ಹಳದಿ ಕಾರ್ಡ್‌ಗಳನ್ನು ಪಡೆದ ಭಾರತದ ಬಲ ಹಿಂಬದಿ ಆಟಗಾರ ರಾಹುಲ್ ಭೆಕೆ 17ನೇ ನಿಮಿಷದಲ್ಲೇ ಮೈದಾನದಿಂದ ನಿರ್ಗಮಿಸಬೇಕಾಯಿತು.