ಲಕ್ಷ್ಮಣತೀರ್ಥ ನದಿಯಲ್ಲಿ ಪ್ರವಾಹ ಭೀತಿ: ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜನರಿಗೆ ಸೂಚನೆ…

ಮೈಸೂರು,ಆ,6,2020(www.justkannada.in): ಹುಣಸೂರಿನಲ್ಲಿ ಮಳೆರಾಯನ ಅಬ್ಬರದಿಂದಾಗಿ ಲಕ್ಷ್ಮಣತೀರ್ಥ ನದಿ ಉಕ್ಕಿಹರಿಯುತ್ತಿದ್ದು  ನದಿಪಾತ್ರದಲ್ಲಿ ಪ್ರವಾಹ ಭೀತಿ ಎದುರಾಗಿದೆ.jk-logo-justkannada-logo

ಭಾರಿ ಮಳೆಯಿಂದಾಗಿ ಲಕ್ಷ್ಮಣ ತೀರ್ಥ ನದಿ, ಹನಗೂಡು ಅಣೆಕಟ್ಟು  ಪಾತ್ರದಲ್ಲಿ ಪ್ರವಾಹ ಭೀತಿ ಉಂಟಾಗಿದ್ದು, ಹನಗೂಡು ಕಿರು ಅಣೆಕಟ್ಟೆ ಸಂಪೂರ್ಣ ಮುಳುಗಡೆಯಾಗಿದೆ. ನದಿಪಾತ್ರದ ಗ್ರಾಮಗಳಾದ ಕೂಣನಹೊಸಳ್ಳಿ, ಕೊಳವಿಗೆ, ಮುದನೂರು ಗ್ರಾಮಗಳಿಗೆ ಎಚ್ಚರಿಕೆ ನೀಡಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತಹಶೀಲ್ದಾರ್ ಬಸವರಾಜ್‌ ನೋಟಿಸ್ ಜಾರಿ ಮಾಡಿದ್ದಾರೆ.flooding-lakshmana-tirtha-river-instruct-people-hunsur

ಹಾಗೆಯೇ ನದಿ ಪಾತ್ರದ‌ ಜನರಿಗೆ ಪೊಲೀಸರೂ ಸಹ ಬಹಿರಂಗ ಎಚ್ಚರಿಕೆ ನೀಡಿದ್ದಾರೆ. ಮೈಕ್‌ನಲ್ಲಿ ಘೋಷಣೆ ಮಾಡುತ್ತಾ ನದಿ ಪಾತ್ರದ‌ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಿದ್ದಾರೆ. ಅಲ್ಲದೆ ನದಿಯ ಅಕ್ಕಪಕ್ಕದ ಗ್ರಾಮಗಳಿಗೆ ಮುಂಜಾಗ್ರತೆ ವಹಿಸುವಂತೆ ಮೈಕ್ ನಲ್ಲಿ ಪೊಲೀಸರು ಘೋಷಣೆ ಮಾಡಿದರು.

Key words: Flooding – lakshmana Tirtha –River-Instruct -people -hunsur