ಫ್ಲಿಪ್ ಕಾರ್ಟ್ ಡೆಲಿವರಿ ಬಾಯ್ ಗೆ ಗ್ರಾಹಕನಿಂದಲೇ ವಂಚನೆ…

ಬೆಂಗಳೂರು,ಮೇ,29,2019(www.justkannada.in):  ಗ್ರಾಹಕನೇ ಫ್ಲಿಪ್ ಕಾರ್ಟ್ ಡೆಲಿವರಿ ಬಾಯ್ ಗೆ ಮೋಸ ಮಾಡಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ರಾಹುಲ್ ಎಂಬಾತನೇ ಫ್ಲಿಪ್ ಕಾರ್ಟ್ ಡಿಲಿವರಿ ಬಾಯ್ ಗೆ ಮೋಸ ಮಾಡಿರುವ ಗ್ರಾಹಕ. ರಾಹುಲ್  50,000 ರೂ. ಬೆಲೆಯ ಫೋನ್ ಬುಕ್ ಮಾಡಿದ್ದ. ನಂತರ ಫೋನ್ ಪಡೆಯಲು ಆರ್.ಆರ್. ನಗರ ಬಳಿ ಫೋನ್ ಪಡೆಯಲು ಬಂದಿದ್ದು, ಡೆಲಿವರಿ ಬಾಯ್ ಬಳಿ ಮೊಬೈಲ್ ಪಡೆಯುವ ವೇಳೆ ರಾಹುಲ್ ಮತ್ತು ಆತನ ಸ್ನೇಹಿತರು ವಂಚಿಸಿದ್ದಾರೆ ಎನ್ನಲಾಗಿದೆ.

ಹಣ ಕಡಿಮೆ ಇದೆ. ಫ್ಲಿಪ್ ಕಾರ್ಟ್ ಕಚೇರಿಗೆ ಬಂದು ಮೊಬೈಲ್ ಪಡೆಯುತ್ತೇನೆ ಎಂದು ಹೇಳಿದ ರಾಹುಲ್ ಪರಿಶೀಲನೆ ನೆಪದಲ್ಲಿ ಮೊಬೈಲ್ ಅನ್ನ ಪಡೆದಿದ್ದಾನೆ. ಈ ವೇಳೆ ಮೊಬೈಲ್ ಬಾಕ್ಸ್ ನಲ್ಲಿ ಕಲ್ಲಿಟ್ಟು ಕಳುಹಿಸಿದ್ದಾನೆ. ನಂತರ ಡೆಲಿವರಿ ಬಾಯ್  ಕಚೇರಿಗೆ ವಾಪಸ್ ಬಂದಾಗ ರಾಹುಲ್ ವಂಚನೆ ಮಾಡಿರುವುದು ತಿಳಿದಿದೆ. ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಈ ಕುರಿತು ದೂರು ನೀಡಲಾಗಿದೆ.

Key words: Flip Cart Delivery Boy frauds from customer.

#FlipCart #DeliveryBoy #frauds #customer.